ಜೆಎನ್‌ಯು ಮಾಜಿ ಪ್ರಾಧ್ಯಾಪಕಿ ಅಮಿತಾ ಸಿಂಗ್ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಸುದ್ದಿ ಜಾಲತಾಣ 'ದಿ ವೈರ್'ಗೆ ನೀಡಲಾಗಿರುವ ಸಮನ್ಸ್ ವಿರುದ್ಧ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಈ ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
'ದಿ ವೈರ್'ನ ಒಡೆತನವನ್ನು ಹೊಂದಿರುವ ಫೌಂಡೇಷನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಮ್ ಈ ಅರ್ಜಿಯನ್ನು ಸಲ್ಲಿಸಿದೆ.
ಮಾನನಷ್ಟ ಪ್ರಕರಣವು 2016ರಲ್ಲಿ ದಿ ವೈರ್ ಪ್ರಕಟಿಸಿದ್ದ 'ದಾಖಲೆಯು ಜೆ ಎನ್ ಯು ಅನ್ನು ಸಂಘಟಿತ ಲೈಂಗಿಕ ದಂಧೆಯ ಗುಹೆ ಎಂದು ಹೇಳುತ್ತದೆ; ದ್ವೇಷ ಅಭಿಯಾನವನ್ನು ಆರೋಪಿಸಿದ ವಿದ್ಯಾರ್ಥಿಗಳು,ಪ್ರಾಧ್ಯಾಪಕರು' ಶೀರ್ಷಿಕೆಯ ಲೇಖನಕ್ಕೆ ಸಂಬಂಧಿಸಿದೆ.
ಅಮೃತಾ ಸಿಂಗ್ ಅವರಿಗೆ ನೋಟಿಸ್ ನೀಡುವಾಗ ನ್ಯಾ.ಸುಂದರೇಶ್ ಅವರು, 'ಇದನ್ನೆಲ್ಲ ಅಪರಾಧ ಮುಕ್ತಗೊಳಿಸುವ ಸಮಯವೀಗ ಬಂದಿದೆ ಎಂದು ನಾನು ಭಾವಿಸಿದ್ದೇನೆ' ಎಂದು ಮೌಖಿಕವಾಗಿ ಹೇಳಿದರು.
ಐಪಿಸಿಯ ಕಲಂ 499ರಡಿಯ ಹಿಂದಿನ ನಿಬಂಧನೆಯ ಬದಲಾಗಿ ಬಂದಿರುವ ಭಾರತೀಯ ನ್ಯಾಯ ಸಂಹಿತಾದ ಕಲಂ 356 ಮಾನನಷ್ಟವನ್ನು ಅಪರಾಧೀಕರಿಸಿದೆ.
ಭಾರತದಲ್ಲಿ ಉದ್ಯಮಗಳು,ವ್ಯಕ್ತಿಗಳು ಮತ್ತು ರಾಜಕಾರಣಿಗಳು ತಮ್ಮ ಪ್ರತಿಸ್ಪರ್ಧಿಗಳು, ಪತ್ರಕರ್ತರು ಮತ್ತು ಮಾಧ್ಯಮ ಕಂಪನಿಗಳ ವಿರುದ್ಧ ಈ ನಿಬಂಧನೆಯನ್ನು ಬಳಸುತ್ತಿದ್ದಾರೆ. ಹೆಚ್ಚಿನ ಪ್ರಜಾಪ್ರಭುತ್ವ ದೇಶಗಳು ಈ ಅಪರಾಧದ ವಿರುದ್ಧ ಸಿವಿಲ್ ಪರಿಹಾರವನ್ನು ಒದಗಿಸಿವೆ.
2016ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ರಾಜಕಾರಣಿಗಳು ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ಬಳಿಕ ನ್ಯಾಯಾಲಯವು ಐಪಿಸಿ ಕಲಂ 499ರ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು.




