HEALTH TIPS

ಕಾಸರಗೋಡಿನಲ್ಲಿ ಕುಟುಂಬಶ್ರೀ ಘಟಕಗಳ ಮೂಲಕ ರೈತರ ಕಲ್ಯಾಣ ಮತ್ತು ಕೃಷಿಗೆ ಉತ್ತೇಜನ- ಓಣಂ, ನವರಾತ್ರಿ ಋತುವಿಗೆ ಕುಟುಂಬಶ್ರೀ ತರಕಾರಿ, ಚೆಂಡುಮಲ್ಲಿಗೆ

ಕಾಸರಗೋಡು: ಜಿಲ್ಲೆಯಲ್ಲಿ ಕೃಷಿ ಇಲಾಖೆಯು ರೈತರು ಮತ್ತು ಕೃಷಿ ವಲಯವನ್ನು ಒಟ್ಟುಗೂಡಿಸುವ ಕೆಲಸ ನಡೆಸುತ್ತಿದ್ದು, ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣದ ಉದ್ದೇಶದಿಂದ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಮತ್ತು ವೈವಿಧ್ಯತೆಯನ್ನು ಜಾರಿಗೆ ತರಲಾಗುತ್ತಿದೆ.

ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿರುವ ಕೆಲವೊಂದು ಚಟುವಟಿಕೆಗಳನ್ನು ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ನಡೆಸಲು ಇಲಾಖೆ ಮುಂದಾಗುತ್ತಿದ್ದು, ಕೃಷಿ ಸಂಸ್ಕøತಿ ಮತ್ತು ರೈತರ ಉನ್ನತಿಯ ಜೊತೆಗೆ ರಾಜ್ಯ ತೋಟಗಾರಿಕೆ ಮಿಷನ್‍ನ ಅಂಗವಾಗಿ ಮಣ್ಣು ಮತ್ತು ಜಲ ಸಂಪನ್ಮೂಲಗಳನ್ನು ಸಂಯೋಜಿಸುವ ಚಟುವಟಿಕೆಗಳನ್ನೂ ಇಲಾಖೆ ಕಾರ್ಯಗತಗೊಳಿಸಲು ಯತ್ನಿಸುತ್ತಿದೆ. ಏಪ್ರಿಲ್ 2019 ರಿಂದ ಏಪ್ರಿಲ್ 2025 ರವರೆಗಿನ ಆರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ವಿವಿಧ ನೈಸರ್ಗಿಕ ವಿಕೋಪಗಳಿಂದ ಉಂಟಾದ ಕೃಷಿ ಹಾನಿಯ ಡೇಟಾವನ್ನು ಏಮ್ಸ್ ಪೆÇೀರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ಇದುವರೆಗೆ ಅರ್ಜಿ ಸಲ್ಲಿಸಿದ 13,994 ರೈತರಿಗೆ 3,64 ಕೋಟಿ ರೂ. ವಿತರಿಸಿರುವುದಾಗಿ ಇಲಾಖೆ ಲೆಕ್ಕಾಚಾರ ತಿಳಿಸಿದೆ.


ಮನುಷ್ಯ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರ:

ಮನವ-ವನ್ಯಜೀವಿ ಸಂಘರ್ಷದಿಂದ ಉಂಟಾಗುವ ಮಾನವ ಸಾವುನೋವುಗಳು ಮತ್ತು ಬೆಳೆ ಮತ್ತು ಜಾನುವಾರು ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಕೇಂದ್ರ ಪ್ರಾಯೋಜಿತ ಯೋಜನೆಯಾದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು ಒಳಪಡಿಸಲಾಗುತ್ತಿದೆ.

ಕೃಷಿ ಪ್ರದೇಶ ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ಸೌರ ಬೇಲಿಗಳು ಮತ್ತು ಸೌರ ನೇತಾಡುವ ಬೇಲಿಗಳನ್ನು ಅಳವಡಿಸಲು ಪ್ರಸ್ತಾವನೆಗಳನ್ನು ಆಹ್ವಾನಿಸುವ ಮೂಲಕ 2023-24 ವರ್ಷಕ್ಕೆ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಜಿಲ್ಲೆಯ ಕಾರಡ್ಕ ಬ್ಲಾಕ್‍ನ ಬೆಳ್ಳೂರು ಗ್ರಾಮ ಪಂಚಾಯಿತಿಂiÀÉ್ಳೂಂದನೇ ವಾರ್ಡು ಮುಳ್ಳಂಕೊಚ್ಚಿಯಿಂದ ಮೂರನೇ ವಾರ್ಡ್‍ನ ಅರ್ತಿಕುಡಲು ವರೆಗಿನ ಒಂಬತ್ತು ಕಿಲೋಮೀಟರ್ ಅರಣ್ಯ ಗಡಿಯಲ್ಲಿ ಸೌರಶಕ್ತಿ ಬೇಲಿನಿರ್ಮಾಣಕಾರ್ಯವನ್ನು ಅರಣ್ಯ ಇಲಾಖೆಯು ಕೇರಳ ಪೆÇಲೀಸ್ ವಸತಿ ಮತ್ತು ನಿರ್ಮಾಣ ನಿಗಮಕ್ಕೆ ವಹಿಸಿಕೊಟ್ಟಿದ್ದು, ಪ್ರಸಕ್ತ ಕೆಲಸ ಪ್ರಾರಂಭವಾಗಿದೆ.

ಓಣಂ ಮಾರುಕಟ್ಟೆ:

ಜಿಲ್ಲೆಯ ಆರು ಬ್ಲಾಕ್ ಪಂಚಾಯಿತಿಗಳಲ್ಲಿ ಕುಟುಂಬಶ್ರೀ ವತಿಯಿಂದ ಹೂವಿನ ಕೃಷಿಯನ್ನು ನಡೆಸಲಾಗುತ್ತಿದೆ. ಓಣಂ ಮತ್ತು ನವರಾತ್ರಿ ಋತುಗಳನ್ನು ಗಮನದಲ್ಲಿಟ್ಟುಕೊಂಡು ಹೂವಿನ ಕೃಷಿಯ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಹೂವಿನ ಕೃಷಿ ಯೋಜನೆಯನ್ವಯ ವಿವಿಧ ಸ್ಥಳಗಳಲ್ಲಿ ನಡೆಸಲಾಗಿರುವ ವಿವಿಧ ಪ್ರಬೇಧಗಳ ಹೂವುಗಳನ್ನು ಬೆಳೆಸಲಾಗಿದ್ದು, ಪ್ರಸಕ್ತ ಕೊಯ್ಲಿಗೆ ಸಿದ್ಧವಾಗಿದೆ. ಕುಟುಂಬಶ್ರೀ ನೆರೆಹೊರೆಯ ಮಹಿಳೆಯರು, ಸಾಮೂಹಿಕವಾಗಿ ಮತ್ತು ವೈಯಕ್ತಿಕವಾಗಿ,ಹೂವಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ, ಚೆಂಡುಮಲ್ಲಿಗೆ ಮತ್ತು ಮಲ್ಲಿಗೆ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲಿವೆ. ಜಿಲ್ಲೆಯಲ್ಲಿ ಒಟ್ಟು 35 ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಕೃಷಿಯನ್ನು ಕೈಗೊಳ್ಳಲಾಗುತ್ತದೆ. ರಾಜ್ಯ ತೋಟಗಾರಿಕೆ ಇಲಾಖೆಯು ಕೃಷಿ ಇಲಾಖೆಯ ಅಡಿಯಲ್ಲಿದೆ.

ಈ ಯೋಜನೆಯನ್ನು ಸಂಸ್ಕøತಿ ಮಿಷನ್ ಅನುಷ್ಠಾನಗೊಳಿಸುತ್ತಿದೆ. ಓಣಂ ಮಾರುಕಟ್ಟೆಗಾಗಿ ತರಕಾರಿ ಈಗಾಘಲೇಏ ಕೊಯ್ಲು ನಡೆಸಲಾಗಿದೆ. ಜಿಲ್ಲೆಯ ಎಲ್ಲಾ 'ಕೃಷಿ ಮನೆ'ಗಳ ಅಡಿಯಲ್ಲಿ ಓಣಂ ಮಾರುಕಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಓಣಂ ಖಾದ್ಯಗಳಿಗಾಗಿ ಸ್ಥಳೀಯ ರೈತರಿಂದ ತರಕಾರಿಗಳನ್ನು ಪೂರೈಸುವ ಕೃಷಿ ಇಲಾಖೆಯ ಯೋಜನೆ ಯಶಸ್ವಿಯಾಗುತ್ತಿದೆ.


ಅಭಿಮತ:

ಕೃಷಿ ಅಭಿವೃದ್ಧಿಗಾಗಿ ಇಲಾಖೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳುವ ನಿಟ್ಟಿನಲ್ಲಿ ಪರಿಸರ ಮಳಿಗೆಗಳು, ಎ ದರ್ಜೆಯ ಕ್ಲಸ್ಟರ್‍ಗಳು, ವಾರದ ಮಾರುಕಟ್ಟೆಗಳು ಮತ್ತು ನಗರ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿವೆ. ಕುಟುಂಬಶ್ರೀ ಘಟಕಗಳ ಮೂಲಕವೂ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. 

ಕೆ. ಆನಂದ, ಯೋಜನಾ ನಿರ್ದೇಶಕ

ಕೃಷಿ ಇಲಾಖೆ'ಆತ್ಮಾ'ಯೋಜನೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries