ಉಪ್ಪಳ: ಕಾಯರ್ಕಟ್ಟೆ ಸರ್ಕಾರಿ ಫ್ರೌಢಶಾಲೆ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ಭಾನುವಾರ ನಡೆಯಿತು. ಅಶ್ವಥ್ ಲಾಲ್ ಭಾಗ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎ.ಇ.ಒ. ಕೃಷ್ಣಮೂರ್ತಿ ಎಂ.ಎಸ್., ಉದಯಶಂಕರ ಮಾಸ್ತರ್, ಕೆ.ಎಂ.ಬಲ್ಲಾಳ್, ರವೀಂದ್ರ ಜೋಡುಕಲ್ಲು, ರವೀಂದ್ರನಾಥ ಪಾವಲಕೋಡಿ, ರಾಘವ ಚೇರಾಲು, ಹಮೀದ್ ಕಾಯರ್ಕಟ್ಟೆ, ಪದ್ಮಾವತಿ ಏದಾರ್, ಗಿರೀಶ ಸೊಂದಿ, ಸಿದ್ದಿಕ್ ಮಾಸ್ತರ್, ಹಮೀದ್ ಮಾಸ್ತರ್, ಕುಮಾರ ಶಂಕರ, ವಿನೋದ್, ಹಮೀದ್ ಬೇಕೂರು ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯೋಪಾಧ್ಯಾಯಿನಿ ಭಾಗ್ಯಲಕ್ಷ್ಮೀ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ವಸಂತಕುಮಾರ್ ಸಭೆಯ ಉದ್ದೇಶಗಳನ್ನು ವಿವರಿಸಿದರು. ಪ್ರಾಂಶುಪಾಲ ಡೊಮಿನಿಕ್ ಮಾತನಾಡಿದರು. ಹರೀಶ ಮಾಸ್ತರ್ ಸ್ವಾಗತಿಸಿ, ಅಬ್ದುಲ್ ರಸಾಕ್ ವಂದಿಸಿದರು. ಓಣಂ ಹಬ್ಬದ ಅಂಗವಾಗಿ ಹೂವಿನ ರಂಗೋಲಿ ರಚಿಸಲಾಯಿತು.
ಅ. 19 ರಂದು ಶಾಲಾ ಪೂರ್ವ ವಿದ್ಯಾರ್ಥಿಗಳ ವಿಶಾಲ ಸಂಗಮ ನಡೆಸುವುದು, ಸಂಗಮದಲ್ಲಿ ಪೂರ್ವ ವಿದ್ಯಾರ್ಥಿ ಸಂಘಟನೆಗೆ ಅಧಿಕೃತ ಸಮಿತಿ ರೂಪಿಸುವುದು, ಶಾಲೆಯ ಜೊತೆಗೆ ಪೂರ್ವ ವಿದ್ಯಾರ್ಥಿಗಳಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳುವ ರೀತಿಯಲ್ಲಿ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸಾಹಿತ್ಯೋತ್ಸವ, ಕ್ರೀಡೋತ್ಸವ ಮೊದಲಾದವುಗಳನ್ನು ನಡೆಸುವುದು, ಕಿರಿಯ ಹಿರಿಯ ಪ್ರಾಥಮಿಕ ಶಾಲೆಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವ ರೀತಿಯಲ್ಲಿ ಸುತ್ತಮುತ್ತಲಿನ ಪ್ರಾಥಮಿಕ ಶಾಲೆ, ಅಲ್ಲಿನ ರಕ್ಷಕರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಳ್ಳುವುದು, ವಿವಿಧ ವರ್ಷಗಳಲ್ಲಿ ಹತ್ತನೇ ತರಗತಿ ಹಾಗೂ 12 ನೇ ತರಗತಿ ಪೂರ್ತಿಗೊಳಿಸಿದ ಪೂರ್ವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರೂಪಿಸುವುದು ಮೊದಲಾದ ತೀರ್ಮಾನಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.




.jpg)
.jpg)
