ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದ ಆಶ್ರಯದಲ್ಲಿ ಓಣಂ ಆಚರಣೆಯ ಅಂಗವಾಗಿ ಹೂವಿನ ರಂಗೋಲಿ ಸ್ಪರ್ಧೆ, ಓಣಪ್ಪಾಟ್ಟು ಸ್ಪರ್ಧೆ, ಕಥೆ ಬರೆಯುವುದು, ಭಾಷಣ, ಕವನ ವಾಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.
ಸಜೀಂದ್ರನ್ ಕಾರಡ್ಕ, ಚಂದ್ರನ್ ಮೊಟ್ಟೊಮ್ಮಲ್, ವಿನೋದ್ ನಾರಾಯಣನ್ ಬೋವಿಕ್ಕಾನ, ಸೂರಜ್ ಮಾಸ್ತರ್, ರಂಜಿತ್ ಮಾಸ್ತರ್ ಮತ್ತು ಕೆ.ಕೆ. ಮೋಹನನ್ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಚಂದ್ರನ್ ಮೊಟ್ಟೊಮ್ಮಾಲ್ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮವನ್ನು ಜಿಲ್ಲಾ ಗ್ರಂಥಾಲಯ ಕೌನ್ಸಿಲ್ ಸದಸ್ಯ ಬಿ.ರಾಧಾಕೃಷ್ಣನ್ ಉದ್ಘಾಟಿಸಿದರು. ಬಾಲಚಂದ್ರನ್ ಮಾಸ್ತರ್, ವಿನ್ಯಾ ಎಸ್. ಯಾದವ್. ಶ್ರಯೋಗರಾಜ್ ಸಿ. ಮಾತನಾಡಿದರು. ಕೆ.ಕೆ. ಮೋಹನನ್ ಸ್ವಾಗತಿಸಿ, ರಂಜಿತ್ ಕೆ.ಕೆ. ವಂದಿಸಿದರು.




.jpg)
