ಕಾಸರಗೋಡು: ಸ್ಕೂಟರ್ ಹಿಂಭಾಗಕ್ಕೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಕಳನಾಡು ರೈಲ್ವೆ ನಿಲ್ದಾಣ ಸನಿಹದ ನಿವಾಸಿ ಮಹಮ್ಮದ್ ಅಶ್ರಫ್ ಪಯ್ಯೋಟಂ(64)ಮೃತಪಟ್ಟಿದ್ದಾರೆ. ಅಶ್ರಫ್ ಅವರು ತಮ್ಮ ಸ್ಕೂಟರಲ್ಲಿ ಸೋಮವಾರ ಬೆಳಗ್ಗೆ ಉದುಮ ಭಾಗಕ್ಕೆ ತೆರಳುತ್ತಿದ್ದಾಗ ಕೆಎಸ್‍ಟಿಪಿ ರಸ್ತೆ ಕಳನಾಡಿನಲ್ಲಿ ಅಪಘಾತ ನಡೆದಿದೆ. ಮಹಮ್ಮದ್ ಅಶ್ರಫ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಪ್ರಯೋಜನವಾಗಿರಲಿಲ್ಲ. ಗಲ್ಫ್ ಉದ್ಯೋಗಿಯಾಗಿದ್ದ ಮಹಮ್ಮದ್ ಅಶ್ರಫ್ ಕೆಲವು ವರ್ಷಗಳ ಹಿಂದೆ ಊರಿಗೆ ವಾಪಸಾಗಿದ್ದರು. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.





