ಬದಿಯಡ್ಕ: ಪರೋಟ ಹಾಗೂ ಬಾಳೆಹಣ್ಣು ಗಂಟಲಲ್ಲಿ ಸಿಲುಕಿದ ಪರಿಣಾಮ ವೆಲ್ಡಿಂಗ್ ಕಾರ್ಮಿಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಡ್ಕ ಚುಳ್ಳಿಕ್ಕಾನ ನಿವಾಸಿ ದಿ. ಪೊಕ್ರಯಿಲ್ ಡಿ.ಸೋಜ ಅವರ ಪುತ್ರ ವಿಶಾಂತಿ ಡಿ.ಸೋಜ(52)ಮೃತಪಟ್ಟವರು.
ಬಾರಡ್ಕದ ಗೂಡಂಗಡಿಯೊಂದರಿಂದ ಬಾಳೆಹಣ್ಣು ಹಾಗೂ ಪರೋಟ ಖರೀದಿಸಿ ಸೇವಿಸುವ ಮಧ್ಯೆ, ಗಂಟಲಲ್ಲಿ ಸಿಲುಕಿ ಉಸಿರಾಟ ಸಮಸ್ಯೆ ಎದುರಿಸಿದ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು. ಅಸಹಜ ಸವಿನ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿಶಾಂತಿ ಡಿ.ಸೋಜ ಅವರು ಕಟ್ಟತ್ತಡ್ಕದಲ್ಲಿರುವ ವೆಲ್ಡಿಂಗ್ ಅಂಗಡಿಯೊಂದರಲ್ಲಿ ಹೆಲ್ಪರ್ ಆಗಿ ದುಡಿಯುತ್ತಿದ್ದರು.




