ಕುಂಬಳೆ: ಕುಂಬಳೆ ಸಮೀಪದ ಆರಿಕ್ಕಾಡಿ ಮಠದ ಮನೆಯಲ್ಲಿ ಶ್ರೀ ಕಾಳಿಕಾಂಬಾ ವಿನಾಯಕ ಸೇವಾ ಸಮಿತಿಯ ಆಶ್ರಯದಲ್ಲಿ ವಾರ್ಷಿಕ ಹರಿಸೇವೆ ಕಾರ್ಯಕ್ರಮದ ಅಂಗವಾಗಿ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಇಂದ್ರಜಿತು ಕಾಳಗ ಯಕ್ಷಗಾನ ತಾಳಮದ್ದಳೆ ಜರಗಿತು.
ಭಾಗವತರಾಗಿ ಶಿವಶಂಕರ ಭಟ್ ತಲ್ಪಣಾಜೆ, ವೆಂಕಟರಾಜ ಕುಂಟಿಕಾನ ಹಿಮ್ಮೇಳದಲ್ಲಿ, ರಾಜೇಂದ್ರಪ್ರಸಾದ್ ಪುಂಡಿಕಾಯಿ, ಲಕ್ಷ್ಮೀಶ ಬೇಂಗ್ರೋಡಿ ಪಾತ್ರವರ್ಗದಲ್ಲಿ ಉದಯಶಂಕರ ಭಟ್ ಮಜಲು, ಅಶೋಕ ಶೇಡಿಕಾವು, ಸದಾಶಿವ ಮುಳಿಯಡ್ಕ, ಪ್ರತಾಪ ಕುಂಬಳೆ, ವೇಣುಗೋಪಾಲ ಶೆಟ್ಟಿ ಮುಗು, ಗುರುಮೂರ್ತಿ ನಾಯ್ಕಾಪು ಮುಮ್ಮೇಳದಲ್ಲಿ ಭಾಗವಹಿಸಿದರು.




.jpg)
