ಮಂಜೇಶ್ವರ: ಕುಳೂರು ಚಿನಾಲ ನವಯುವಕ ಕಲಾವೃಂದ ಗ್ರಂಥಾಲಯ ವತಿಯಿಂದ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸಹಯೋಗದೊಂದಿಗೆ, ನಡೆಸಿದ ಶಿಕ್ಷಕರ ದಿನಾಚರಣೆಯ ಭಾಗವಾಗಿ ಅಧ್ಯಾಪಕ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಜಿ. ನಾರಾಯಣ ರಾವ್ ಅವರನ್ನ ಮಜಿಬೈಲ್ ನ ಸ್ವಗೃಹದಲ್ಲಿ ಶುಕ್ರವಾರ ಗೌರವಿಸಿ ಸನ್ಮಾನಿಸಲಾಯಿತು.
ಗ್ರಂಥಾಲಯದ ಅಧ್ಯಕ್ಷ ಯೋಗೀಶ್ ಕೆ. ಅವರ ಅಧ್ಯಕ್ಷತೆಯಲ್ಲಿ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಸಮಾರಂಭವನ್ನು ಉದ್ಘಾಟಿಸಿದರು. ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ದಾಸಪ್ಪ ಶೆಟ್ಟಿ, ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ, ಕಾರ್ಯಕಾರಿ ಸಮಿತಿ ಸದಸ್ಯ ಕಿಶೋರ್ ಪಾವಳ, ಮೀಂಜ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ಬಿ.ಯಂ., ರಾಮಯ್ಯ ಶೆಟ್ಟಿ, ಲೈಬ್ರರಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ, ನವಯುವಕ ಕಲಾವೃಂದ ಅಧ್ಯಕ್ಷ ಮೋನಪ್ಪ ಪೂಜಾರಿ, ಲೈಬ್ರರಿ ಸಂಚಾಲಕ ಲೋಕೇಶ್ ಚಿನಾಲ, ಯುವ ಕವಿ ಲವಾನಂದ ಎಲಿಯಾಣ ಮೊದಲಾದವರು ಉಪಸ್ಥಿತರಿದ್ದರು. ಶ್ರೀಲತಾ ಪ್ರಶಸ್ತಿ ಪತ್ರ ವಾಚಿಸಿದರು. ರವೀಂದ್ರ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂದೀಪ್ ಕೆ. ಸ್ವಾಗತಿಸಿ, ಉದಯ ಸಿ. ಹೆಚ್.ವಂದಿಸಿದರು.




.jpg)
