ಪೆರ್ಲ: ಶಿಕ್ಷಕರ ದಿನಾಚರಣೆ ಅಂಗವಾಗಿ ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಪಡ್ರೆ ವಾಣೀನಗರ ಸರಕಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀನಿವಾಸ ಭಟ್ ಅಜಕ್ಕಳಮೂಲೆ ಮತ್ತು ಲಕ್ಷ್ಮೀಶ ಕಡಂಬಳಿತ್ತಾಯರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಗೀತಾಕುಮಾರಿ ಬಿ., ಮಾತೃ ಸಂಘದ ಅಧ್ಯಕ್ಷೆ ಗಾಯತ್ರಿ, ಶಿಕ್ಷಕರಾದ ವೆಂಕಟ ವಿದ್ಯಾಸಾಗರ್, ಕಲಾವತಿ, ಶ್ರೀಹರಿ ಶಂಕರ ಶರ್ಮ, ಮಂಜುನಾಥ್ ಉಪಸ್ಥಿತರಿದ್ದರು.




.jpg)
.jpg)
