ಕಾಸರಗೋಡು: ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ)ವೆಸ್ಟ್ ಯೂನಿಟ್ ನೇತೃತ್ವದಲ್ಲಿ ಎಕೆಪಿಎ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಆದ್ರ್ರಾರಾಜೇಂದ್ರನ್ ತಮ್ಮ ಕೇಶದಾನ ಮಾಡಿದರು. ಆದ್ರ್ರಾರಾಜೇಂದ್ರನ್ ಅವರು ಸಾಂತ್ವನಂ ಸಂಯೋಜಕಿ ಶಾಲಿನಿ ರಾಜೇಂದ್ರನ್ ಅವರ ಪುತ್ರಿ ಮತ್ತು ಪೆರಿಯಾ ನವೋದಯ ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ತಮ್ಮ ಸಮಾಮುಖಿ ಚಟುವಟಿಕೆಯನ್ವಯ ಕೇಶದಾನ ಮಾಡಿದ್ದಾರೆ.
ಎಕೆಪಿಎ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸುಳ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದಯಭಾಸ್ಕರ್ ಸುಳ್ಯ ಸಾರಥ್ಯದ ಅಮೃತ ಗಂಗಾ ಸಮಾಜ ಸೇವಾ ಸಂಸ್ಥೆಯ ಪರವಾಗಿ ಯೂನಿಟ್ ಅಧ್ಯಕ್ಷ ವಸಂತ ಕೆರಮನೆ ಅವರು ಆದ್ರ್ರಾರಾಜೇಂದ್ರನ್ ಅವರಿಂದ ಕೇಶ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಎಕೆಪಿಎ ಜಿಲ್ಲಾ ಕ್ರೀಡಾ ಸಂಯೋಜಕ ರತೀಶ್ ರಾಮು, ಪ್ರಾದೇಶಿಕ ಸಮಿತಿ ಕೋಶಾಧಿಕಾರಿ ಮನು ಎಲ್ಲೋರ, ಯೂನಿಟ್ ಸದಸ್ಯರಾದ ಮೈಂದಪ್ಪ, ಚಂದ್ರಶೇಖರ್, ವಾಸು, ಅಮಿತ್, ಅಭಿಷೇಕ್, ಆದ್ರ್ರಾರಾಜೇಂದ್ರನ್ ಅವರ ತಂದೆ ರಾಜೇಂದ್ರನ್ ನರಂತಟ್ಟ, ಸಹೋದರಿ ನಂದಲಕ್ಷ್ಮಿ ಉಪಸ್ಥಿತರಿದ್ದರು.
ಯೂನಿಟ್ ಕಾರ್ಯದರ್ಶಿ ವಿಶಾಖ್ ಸ್ವಾಗತಿಸಿದರು. ಕೋಶಾಧಿಕಾರಿ ಗಣೇಶ್ ರೈ ವಂದಿಸಿದರು.





