ಕಾಸರಗೋಡು: ಸಣ್ಣ ತಿರುಪತಿ ಎಂದೇ ಪ್ರಸಿದ್ಧವಾದ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೆ. 22 ರಿಂದ 2ರ ವರೆಗೆ ಜರುಗಲಿರುವ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಗೆ ಹಸ್ತಾಂತರಿಸಲಾಯಿತು.
ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಆಮಂತ್ರಣಪತ್ರಿಕೆ ನೀಡಿ, ಸ್ವಾಮೀಜಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭ ಕ್ಷೇತ್ರ ಸಮಿತಿ ಪ್ರಮುಖಂಡರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಜತೆಗಿದ್ದರು.





