ಕಾಸರಗೋಡು: ಇನ್‍ಸ್ಟಾಗ್ರಾಂ ಮೂಲಕ ಪರಿಚಯಗೊಂಡ ಹದಿನೈದರ ಬಾಲಕಿಯನ್ನು ಎರ್ನಾಕುಳಂಗೆ ಕರೆದೊಯ್ದು ನಗ್ನಚಿತ್ರ ತೆಗೆದು, ಬೆದರಿಸಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಸೇರಿದಂತೆ ಮೂರು ಮಂದಿಯ ವಿರುದ್ಧ ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಶೇಣಿ ನಿವಾಸಿಗಳಾದ ಜಾಸಿರ್ ಹಾಗೂ ಸಕೀರ್ ಬಂಧಿತರು. ಯುವತಿ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಹದಿನೈದರ ಬಾಲಕಿಯನ್ನು ಪರಿಚಯಮಾಡಿಕೊಂಡ ತಂಡ, ಈಕೆಯನ್ನು ಪುಸಲಾಯಿಸಿ ನಗ್ನ ಚಿತ್ರ ಪಡೆದುಕೊಂಡಿದ್ದಾರೆ. ಬಾಲಕಿಯನ್ನು ಬ್ಲ್ಯಾಕ್‍ಮೇಲ್ ಮಾಡಿ ಆಕೆಯಿಂದ ಹಣ ಎಗರಿಸಿದ್ದರು. ನಂತರ ಎರ್ನಾಕುಳಂಗೆ ಕರೆದೊಯ್ದು, ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಈ ಬಗ್ಗೆ ಬಾಲಕಿ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.




