ಪೆರ್ಲ: ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಎಸ್ ಎಸ್ ಜಿ ಸದಸ್ಯ ನಾರಾಯಣ ಪೂಜಾರಿ ಸಮಾರಂಭ ಉದ್ಘಾಟಿಸಿದರು. ಎಸ್ ಎಂ ಸಿ ಅಧ್ಯಕ್ಷ ನಾರಾಯಣ ಪರಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಬಿ, ಉಪಾಧ್ಯಕ್ಷ ಚನಿಯಪ್ಪ ಪರ ಗುಡ್ಡೆ ಎಸ್ ಎಂ ಸಿ ಉಪಾಧ್ಯಕ್ಷ ಪುರಂದರ ಮತ್ತು ಎಂ ಪಿ ಟಿ ಎ ಅಧ್ಯಕ್ಷೆ ಪದ್ಮಾವತಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ಪಿಟಿಎ ಸಹಕಾರದೊಂದಿಗೆ ವಿವಿಧ ಭಕ್ಷಗಳಿಂದ ಕೂಡಿದ ಓಣಂ ಔತಣ ಕೂಟ ನಡೆಯಿತು. ಶಾಲಾ ಶಿಕ್ಷಕ ಮೊಹಮ್ಮದ್ ಪೈಸೆಲ್ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಸಹನಾ ಕೆ ನಿರೂಪಿಸಿದರು. ಶಾಲಾ ಶಿಕ್ಷಕಿ ಸಾಹಿದಾ ವಂದಿಸಿದರು.





