ಪೆರ್ಲ: ಪೆರ್ಲ ಪೇಟೆಯ ಮುಖ್ಯರಸ್ತೆಯಲ್ಲಿ ಆಟೋರಿಕ್ಚಾದ ಹಿಂಭಾಗಕ್ಕೆ ಕಾರು ಡಿಕ್ಕಿಯಾದ ಪರಿಣಾಂ ಆಟೋಚಾಲಕ ಮೃತಪಟ್ಟು, ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಐಗೊಂಡಿದ್ದಾರೆ. ಬುಧವಾರ ರಾತ್ರಿ ಅಪಘಾತ ನಡೆದಿದ್ದು, ಆಟೋಚಾಲಕ ಮಣಿಯಂಪಾರೆ ಶೇಣಿ ಬಾರೆದಳ ನಿವಾಸಿ ನಾರಾಯಣ ಮೂಲ್ಯ (67)ಮೃತಪಟ್ಟವರು.
ಇವರು ಚಲಾಯಿಸುತ್ತಿದ್ದ ರಿಕ್ಷಾದ ಹಿಂಭಾಗಕ್ಕೆ ಕಾರು ಡಿಕ್ಕಿಯಾಗಿದ್ದು, ಈ ಸಂದರ್ಭ ರಿಕ್ಷಾ ಪಲ್ಟಿಯಾಗಿದ್ದು, ಅದರಲ್ಲಿದ್ದ ಪ್ರಯಾಣಿಕರಿಗೂ ತೀವ್ರ ಗಾಯಗಳುಂಟಾಗಿದೆ. ಶೇಣಿ ಶಾಲಾ ಬಳಿ ರಿಕ್ಷಾ ಚಲಾಯಿಸುತ್ತಿದ್ದ ಇವರು ಮಣಿಯಂಪಾರೆ ನಿವಾಸಿಯಾದ ರೋಗಿಯೊಬ್ಬರನ್ನು ಪೆರ್ಲದ ಖಾಸಗೀ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ವಾಪಸಾಗುವ ಮಧ್ಯೆ ಅಪಘಾತ ನಡೆದಿದೆ.
ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡ ನಾರಾಯಣ ಅವರನ್ನು ತಕ್ಷಣ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.
ಶೇಣಿ ಅಯ್ಯಪ್ಪ ಮಂದಿರದ ಸ್ಥಾಪಕ ಸದಸ್ಯರಾಗಿದ್ದ ಇವರು ಅಯ್ಯಪ್ಪ ವ್ರತಧಾರಿಗಳಿಗೆ ಮುದ್ರಾಧಾರಣೆ ಮಾಡುವ ಮೂಲಕ ಪ್ರಧಾನ ಗುರುಸ್ವಾಮಿಗಳಾಗಿ ಹೆಸರುಗಳಿಸಿದ್ದಾರೆ.





