ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಷಟ್ಪಥ ಕಾಮಗಾರಿಯನ್ವಯ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸುವ ಮಧ್ಯೆ ಮೊಗ್ರಾಲ್‍ಪುತ್ತೂರಿನಲ್ಲಿ ಕ್ರೇನ್ ತುಂಡಾಗಿ ಬಿದ್ದು, ಅದರಲ್ಲಿದ್ದ ಇಬ್ಬರು ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ವಡಗರ ನಿವಾಸಿಗಳಾದ ಅಕ್ಷಯ್(38)ಹಾಗೂ ಅಶ್ವಿನ್(26)ಮೃತಪಟ್ಟವರು.
ಹೆದ್ದಾರಿಯಲ್ಲಿ ಅಳವಡಿಸಿರುವ ಬೃಹತ್ ವಿದ್ಯುತ್ ಕಂಬಕ್ಕೆ ದೀಪ ಅಳವಡಿಸಲು ಬಳಸಿದ್ದ ಬೃಹತ್ ಕ್ರೇನಿನ ಬಕೆಟ್, ಯಂತ್ರದಿಂದ ಬೇರ್ಪಟ್ಟು ಕಳಚಿ ರಸ್ತೆಗೆ ಬಿದ್ದಿದೆ. ಗಂಭೀರ ಗಾಯಗೊಂಡ ಇಬ್ಬರನ್ನೂ ತಕ್ಷಣ ಕುಂಬಳೆಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.





