ಕಾಸರಗೋಡು: ಹೆಬ್ಬಾವನ್ನು ಸೆರೆಹಿಡಿದು, ಪದಾರ್ಥ ಮಾಡಿ ಸೇವಿಸಿದ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪಯ್ಯನ್ನೂರು ಪಾಣಾಪ್ಪುಳ ಮುಂಡಪ್ಪುರಂ ನಿವಾಸಿಗಳಾದ ಪ್ರಮೋದ್ ಹಾಗೂ ಜಿನೀಶ್ ಬಂಧಿತರು. ಹೆಬ್ಬಾವನ್ನು ಕಾಡಿನಿಂದ ಸೆರೆ ಹಿಡಿದ ತಂಡ, ಮನೆಗೆ ಕೊಂಡೊಯ್ದು ಪದಾರ್ಥ ಮಾಡಿರುವ ಬಗ್ಗೆ ಮಾಹಿತಿ ಪಡೆದ ಫಾರೆಸ್ಟ್ ರೇಂಜ್ ಅಧಿಕಾರಿ ಪಿ.ಬಿ ಸನೂಪ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಮನೆ ಸುತ್ತುವರಿದು ತಪಸಣೆ ನಡೆಸಿದಾಗ ಹೆಬ್ಬಾವಿನ ಚಿಲ್ಲಿ ತಯಾರಿಸಿ ಸೇವಿಸುತ್ತಿರುವುದು ಕಂಡುಬಂದಿತ್ತು. ಹೆಬ್ಬಾವು ಸಂರಕ್ಷಿತ ವಿಭಾಗದ ಜೀವಿಯಾಗಿ ಪರಿಗಣಿಸಲ್ಪಟ್ಟಿರುವುದರಿಂದ ಭಾರತೀಯ ಅರಣ್ಯ ಕಾನೂನಿನನ್ವಯ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದಾದ ಅಪರಾಧವಾಗಿದೆ.




