ಕಾಸರಗೋಡು: ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ಹದಿನೇಳರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸ್ವತ: ಬಾಲಕಿಯ ತಂದೆ, ಆಕೆಯ ಸೋದರ ಮಾವ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಸ್ಥಳೀಯ ನಿವಾಸಿ ವಿಜಯನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಗೆ ಹತ್ತರ ಹರೆಯದಲ್ಲೇ ತಂದೆ ಕಿರುಕುಳಕ್ಕೆ ಆರಂಭಿಸಿದ್ದು, ಭಯದಿಂದ ಬಾಲಕಿ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಎರಡು ವರ್ಷದ ಹಿಂದೆ ಬಾಲಕಿಯ ತಾಯಿಯ ಸಹೋದರನೂ ಕಿರುಕುಳ ನೀಡಿದ್ದು, ತಿಂಗಳ ಹಿಂದೆ ವಿಜಯನ್ ಕಿರುಕುಳ ನೀಡಿರುವ ಬಗ್ಗೆ ಪೊಲೀಸರಿಗೆ ದೂರು ಲಭಿಸಿತ್ತು.




