ಮಂಜೇಶ್ವರ: ಕೇರಳ ಪ್ರದೇಶ್ ಸ್ಕೂಲ್ ಟೀಚರ್ಸ್ ಅಸೋಸಿಯೇಶನ್ ಕೆ.ಪಿ.ಎಸ್.ಟಿ.ಎ ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಶಾಲಾ ಮಟ್ಟದಿಂದ ಆಯ್ಕೆಯಾದ ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲ್ ಹಾಗು ಹೈಯರ್ ಸೆಕೆಂಡರಿ ವಿಭಾಗಗಳಲ್ಲಾಗಿ ಸ್ವದೇಶ್ ಮೆಘಾ ಕ್ವಿಜ್ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಮೀಯಪದವು ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜೋರ್ಜ್ ಕ್ರಾಸ್ತಾ ಸಿ.ಎಸ್ ಉದ್ಘಾಟಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಫಲಕವನ್ನು ನೀಡಿ ಗೌರವಿಸಿದರು. ಕೆ.ಪಿ.ಎಸ್.ಟಿ.ಎ ಜಿಲ್ಲಾ ಉಪಾಧ್ಯಕ್ಷ ಜನಾರ್ಧನನ್ ಕೆ.ವಿ., ಶ್ರೀನಿವಾಸ ಕೆ.ಎಚ್, ಜಬ್ಬಾರ್ ಬಿ., ಮುಳಿಂಜ ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ಸೌಮ್ಯ ಕುಳೂರು, ರವಿಶಂಕರ, ಅಬ್ಸ ಟೀಚರ್, ಅಬ್ದುಲ್ ಬಶೀರ್ ಶುಭಾಶಂಸನೆಗೈದರು. ಉಪಜಿಲ್ಲಾ ಕಾರ್ಯದರ್ಶಿ ಒ.ಎಂ ರಶೀದ್ ಸ್ವಾಗತಿಸಿ, ಕೋಶಾಧಿಕಾರಿ ಪ್ರಸೀದ ಕುಮಾರಿ ವಂದಿಸಿದರು.




.jpg)
