HEALTH TIPS

ಪರಕ್ಕಿಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಮಧೂರು: ಪರಕ್ಕಿಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಾನುವಾರ ಭಕ್ತಿಪೂರ್ಣವಾಗಿ ಆಚರಿಸಲಾಯಿತು. ಬೆಳಗ್ಗಿನಿಂದ ಸಂಜೆವರೆಗೆ ತರುಣ ಕಲಾವೃಂದದ ನೇತೃತ್ವದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಶ್ರೀಕೃಷ್ಣ-ರಾಧಾ ವೇಷಧಾರಿ ಮಕ್ಕಳ ಶೋಭಾಯಾತ್ರೆ ವಿಶೇಷ ಆಕರ್ಷಣೆಯಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರುಣ ಕಲಾವೃಂದದ ಅಧ್ಯಕ್ಷ ರಾಮಕಿಶೋರ್ ಅಸ್ರ ವಹಿಸಿದ್ದರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಆಯುರ್ವೇದ ವೈದ್ಯೆ ಡಾ. ಪಲ್ಲವಿ ಹಾಗೂ ಕರ್ನಾಟಕ ಪೋಲೀಸ್ ವರಿಷ್ಠಾಧಿಕಾರಿ ಶ್ರೀಧರನ್, ವಕೀಲ ಬಾಲಕೃಷ್ಣ ನಾಯರ್ ಶುಭಾಶಂಸನೆ ಗೈದರು. ಬಾಲಕೃಷ್ಣ ಉಳಿಯ (ನಿವೃತ್ತ ತಹಸಿಲ್ದಾರ್), ತರುಣ ಕಲಾವೃಂದ ಮಹಿಳಾ ಸಮಿತಿಯ ಅಧ್ಯಕ್ಷೆ ದೀಪ ಉಳಿಯ ಸಹಿತ ಗಣ್ಯರು ಉಪಸ್ಥಿತರಿದ್ದರು.

ಎಸ್.ಎಸ್.ಎಲ್.ಸಿ., ಪ್ಲಸ್ ಟು ಮತ್ತು ಪದವಿ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕೃಷ್ಣ-ರಾಧೆಯರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ, ಅವರಿಗೆ ಬಹುಮಾನ ವಿತರಿಸಲಾಯಿತು. ಜೊತೆಗೆ ಓಣಂ ಹಾಗೂ ಅಷ್ಟಮಿಯ ಪ್ರಯುಕ್ತ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ಹಸ್ತಾಂತರಿಸಲಾಯಿತು. 

ವಿಠಲ ಗಟ್ಟಿ, ಅಜಿತ್ ಕುಮಾರ್, ದೃಶಿತ್, ಜಗದೀಶ್, ಸಮಿತಿಯ ಸದಸ್ಯರು ಕಾರ್ಯದ ನೇತೃತ್ವ ವಹಿಸಿದ್ದರು. ಮಹಿಳಾ ಸಮಿತಿಯ ಕಾರ್ಯದರ್ಶಿ ಜಯಪ್ರಭಾ ದಿನೇಶ್ ಹಾಗೂ ಸದಸ್ಯೆಯರಾದ ಪ್ರಮೀಳಾ, ರಮ್ಯಾ, ದೃಶ್ಯ, ರಂಜಿತಾ ಮತ್ತು ಇತರರು ಸಹಕರಿಸಿದರು. ಸಾಂಸ್ಕøತಿಕ ಕಾರ್ಯದರ್ಶಿ ಶರಣ್ಯಾ ನಾರಾಯಣನ್ ಕಾರ್ಯಕ್ರಮವನ್ನು ನಿರೂಪಿಸಿದರು. ಪರಕ್ಕಿಲ ಶ್ರೀ ಮಹಾದೇವ ಬಾಲಗೋಕುಲದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಿತಿಯ ಕಾರ್ಯದರ್ಶಿ ಪದ್ಮರಾಜ ಪರಕ್ಕಿಲ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕಿ ದಿವ್ಯಾ ಗಟ್ಟಿ ಪರಕ್ಕಿಲ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries