ಬದಿಯಡ್ಕ: ಒಂದು ವಾರಗಳ ಕಾಲ ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಜರಗಿದ ಶ್ರಾವಣ ಮಾಸದ ಗಮಕ ವಾಚನ ಕಾರ್ಯಕ್ರಮ ಭಾನುವಾರ ಸಂಪನ್ನವಾಯಿತು. ಹಿರಿಯ ವ್ಯಾಖ್ಯಾನಕಾರ ಯಕ್ಷಗಾನ ಅರ್ಥದಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶ್ರೀರಾಮನ ಗುಣಗಾನ ಮಾಡಿ ರಾಮಾಯಣದ ಆಧ್ಯಾತ್ಮ ವಿಚಾರಗಳನ್ನು ವಿವರಿಸಿದರು. ಕೊಚ್ಚಿ ಗೋಪಾಲಕೃಷ್ಣ ಭಟ್ ಮತ್ತು ಶ್ಯಾಮ ಆಳ್ವ ಕಡಾರು ಬೀಡು, ಶಂಕರಶರ್ಮ ಮತ್ತು ಶ್ಯಾಮಪ್ರಸಾದ ಕುಳಮರ್ವ, ವಿಶಾಲಪ್ರಭಾ ಮುಳ್ಳೇರಿಯ, ಶ್ರೀಶಕೃಷ್ಣ ಪಂಜಿತ್ತಡ್ಕ, ಗೋವಿಂದ ಭಟ್ ಬೇಂದ್ರೋಡು, ಸತ್ಯನಾರಾಯಣಶರ್ಮ ಪಂಜಿತ್ತಡ್ಕ, ಕೇಶವ ಕಂಬಾರು, ನರಹರಿ ಕಳತ್ತೂರು, ಶ್ರೀಲತಾ ಕೂಡ್ಲು, ಮೂಲಡ್ಕ ನಾರಾಯಣ, ಮಾಧವ ಭಟ್ ಸ್ವರ್ಗ, ಬಾಲಕೃಷ್ಣ ಆಚಾರ್ಯ ನೀರ್ಚಾಲು ವಿವಿಧ ದಿನಗಳಲ್ಲಿ ವಾಚನ ಹಾಗೂ ವ್ಯಾಖ್ಯಾನದಲ್ಲಿ ಸಹಕರಿಸಿದರು. ನಿವೃತ್ತ ಪ್ರಾಂಶುಪಾಲ ಡಾ.ಬೇ.ಸಿ. ಗೋಪಾಲಕೃಷ್ಣ ಕಾರ್ಯಕ್ರಮ ಸಂಯೋಜನೆ ಮಾಡಿ ವಂದಿಸಿದರು.




.jpg)
