ಪೆರ್ಲ: ಪೆರ್ಲದ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವ ಸೆ. 7ರಂದು ಪೆರ್ಲದ ವ್ಯಾಪಾರಿ ಭವನದಲ್ಲಿ ಜರುಗಲಿದೆ.
ಅಂದು ಬೆಳಿಗ್ಗೆ 9.30ರಿಂದ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸಮಿತಿ ವತಿಯಿಂದ ಭಜನೆ, 10.30ರಿಂದ ಗುರು ಸ್ಮರಣೆ ಮತ್ತು ಸಭಾ ಕಾರ್ಯಕ್ರಮ ಜರುಗುವುದು. ಸಂಘದ ಅಧ್ಯಕ್ಷ ಬಿ.ಪಿ ಶೇಣಿಯವರ ಅಧ್ಯಕ್ಷತೆ ವಹಿಸುವರು. ಧಾರ್ಮಿಕ, ಸಾಮಾಜಿಕ ಮುಂದಾಳು, ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ದಿಕ್ಸೂಚಿ ಭಾಷಣ ಮಾಡುವರು. ಬೆಂಗಳೂರಿನ ಸಿ ಬಿ ಐ ಪಬ್ಲಿಕ್ ಪೆÇ್ರಸಿಕ್ಯೂಟರ್ ಶಿವಾನಂದ ಪೆರ್ಲ, ಉದ್ಯಮಿ, ಸಂಘಟಕ ಚಂದ್ರಶೇಖರ ಚಿಪ್ಳುಕೊಟ್ಟೆ, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ರುಕ್ಮಿಣಿ ಬೆದ್ರಂಪಳ್ಳ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. ಈ ಸಂದರ್ಭ ನಿವೃತ್ತ ಶಿಕ್ಷಕ, ಪರಿಸರ-ಕೃಷಿ ತಜ್ಞ ಉಮೇಶ್ ಕೆ. ಪೆರ್ಲ ಹಾಗೂ ತುಳು, ಕನ್ನಡ ಚಲನಚಿತ್ರ ನಟಿ ಕು. ಪ್ರಜ್ವಲಿ ಸುವರ್ಣ ಮುಗು ಇವರನ್ನು ಸನ್ಮಾನಿಸಲಾಗುವುದು. ಅಲ್ಲದೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿತ್ತಿರುವ ಬಿಲ್ಲವ ಮುಖಂಡರುಗಳಾದ ಸುನೀತ್ ಕುಮಾರ್ ಡಿ, ಬಾಬು ಪೂಜಾರಿ ಕಾನ, ಶಿವಪ್ಪ ಪೂಜಾರಿ ಎಣ್ಮಕಜೆ, ನಾರಾಯಣ ಮಾಸ್ಟರ್ ಕುದ್ವ, ನರಸಿಂಹ ಪೂಜಾರಿ ವಾಣಿನಗರ, ಚನಿಯಪ್ಪ ಪೂಜಾರಿ ಅಲಾರು, ಸುಬ್ಬಣ್ಣ ಪೂಜಾರಿ ಬೆದ್ರಂಪಳ್ಳ, ಸದಾನಂದ ಬೈರಡ್ಕ, ಹರೀಶ ಸಂಟನಡ್ಕ, ಆನಂದ ಮಂಟಪ್ಪಾಡಿ, ರಾಮ್ ಕುಮಾರ್ ಮುಂಡಿತಡ್ಕ, ದಿನೇಶ ಜಿ. ಕೆ. ಬಜಕೂಡ್ಲು, ಸಂಕಪ್ಪ ಪೂಜಾರಿ ಬಾಡೂರು ಪದವು ಇವರನ್ನು ಸಮಾರಂಭದಲ್ಲಿ ಗೌರವಿಸಲಾಗುವುದು. ಈ ಸಂದರ್ಭ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುವುದು.





