ಕಾಸರಗೋಡು ಪೊಯಿನಾಚಿಯ ಕುಂಡಂಗುಳಿ ರಸ್ತೆಯ ಪರಂಬ್ ಎಂಬಲ್ಲಿ ಸ್ಕುಟರ್ ಮಗುಚಿಬಿದ್ದು ವಿದ್ಯಾರ್ಥಿ, ಬೇಡಡ್ಕ ನಿವಾಸಿ ಸಿ. ಕೌಶಿಕ್‍ನಾಥ್(19)ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಕೈಲಾಸ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರಿಬ್ಬರೂ ಚೆರ್ಕಳದಲ್ಲಿರುವ ಸ್ನೇಹಿತನ ಮನೆಗೆ ತೆರಳಿ ವಾಪಸಾಗುವ ಮಧ್ಯೆ ಅಪಘಾತ ಸಂಭವಿಸಿದೆ. ಗಾಯಾಳುಗಳಿಬ್ಬರನ್ನೂ ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದರೂ, ಕೌಶಿಕ್‍ನಾಥ್ ಮೃತಪಟ್ಟಿದ್ದರು. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




