ಬದಿಯಡ್ಕ: ನೀರ್ಚಾಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಾರ್ಷಿಕ ಮಹಾಸಭೆ, ಲೆಕ್ಕಪತ್ರ ಮಂಡನೆ, ನೂತನ ಸಮಿತಿ ರಚನಾ ಸಭೆ ನಾಳೆ(ಭಾನುವಾರ) ಸಂಜೆ 4ಕ್ಕೆ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಪರಿಸರದಲ್ಲಿ ನಡೆಯಲಿದೆ. ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.





