ಕುಂಬಳೆ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮಾಲಿನ್ಯ ವಿಲೇವಾರಿ ಸವಾಲಾಗುತ್ತಿದ್ದು, ಆಡಳಿತ ವರ್ಗದ ಅನಾಸ್ಥೆ ಕಾರಣ ಎಲ್ಲೆಡೆ ಮಾಲಿನ್ಯ ಸರಿಯುವುದು ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ರಾ.ಹೆದ್ದಾರಿಯ ಎರಡೂ ಬದಿಗಳಲ್ಲಿ ಮಾಲಿನ್ಯ ರಾಶಿಬಿದ್ದಿರುವುದರಿಂದ ಮೂಗುಮುಚ್ಚಿ ಸಂಚರಿಸಬೇಕಾದ ಸ್ಥಿತಿ ಇಂದು ನಿನ್ನೆಯದಲ್ಲ. ಜೊತೆಗೆ ಒಳನಾಡುಗಳ ಜನಸಂಖ್ಯೆ ಕಡಿಮೆ ಇರುವಲ್ಲೆಲ್ಲ ರಾತ್ರಿ-ಹಗಲೆನ್ನದೆ ಮಾಲಿನ್ಯಗಳನ್ನು ತಂದು ಎಸೆಯುವಬುದು, ಜಲಮೂಲಗಳನ್ನು ಹಾನಿಗೊಳಿಸುವುದು ಸಾಮಾನ್ಯವಾಗುತ್ತಿದೆ.
ಇದೀಗ ಕೆಂಗಲ್ಲು ಕ್ವಾರೆಗಳಿಗೂ ಮಾಲಿನ್ಯ ಎಸೆಯುವುದು ಕಂಡುಬಂದಿದ್ದು, ಜನರನ್ನು ರೊಚ್ಚಿಗೆಬ್ಬಿಸಿದೆ. ಪುತ್ತಿಗೆ ಗ್ರಾಮ ಪಂಚಾಯತಿಯ ಕಣ್ಣೂರು ವಾರ್ಡ್‍ನ ಸಿದ್ಧಿಬೈಲಿನಲ್ಲಿ ಅಕ್ರಮವಾಗಿ ಕೆಂಪು ಕಲ್ಲಿನ ಕ್ವಾರೆ ಹೊಂಡವನ್ನು ತ್ಯಾಜ್ಯದಿಂದ ತುಂಬಿಸುತ್ತಿದ್ದುದನ್ನು ಸ್ಥಳೀಯರು ಹಿಡಿದು ಪೋಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ವರದಿಯಾಗಿದೆ.
ಪುತ್ತಿಗೆ, ಎಣ್ಮಕಜೆ,ಬದಿಯಡ್ಕ ಮೊದಲಾದ ಗ್ರಾ.ಪಂ.ಗಳಲ್ಲಿ ಬಹಳಷ್ಟು ಕೆಂಗಲ್ಲು ಕ್ವಾರೆಗಳು ಕಾರ್ಯಾಚರಿಸುತ್ತಿದ್ದು, ಒಂದು ಹಂತದ ಕಲ್ಲು ತೆರೆದ ಬಳಿಕ ಹಾಗೆಯೇ ಬಿಟ್ಟುಹೋಗುವುದು ಒಂದು ಕಾನೂನು ಭಂಜನೆಯಾಗಿದ್ದರೆ, ಅದಕ್ಕೆ ತಮದು ಮಾಲಿನ್ಯಗಳನ್ನು ಸುರಿಯುವುದು ಮತ್ತೊಂದು ಅಪರಾಧವಾಗಿದೆ.
ಈ ಬಗ್ಗೆ ಸ್ಥಳೀಯಾಡಳಿತಗಳು, ಪೋಲೀಸರು ಸೂಕ್ತ ಪರಿಶೀಲನೆ, ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹ ನಾಗರಿಕರಿಂದ ಕೇಳಿಬಂದಿದೆ.

.jpg)
.jpg)
