ಕಾಸರಗೋಡು: ಶ್ರೀ ಕೃಷ್ಣ ಪರಮಾತ್ಮ ಪ್ರಪಂಚದ ಮೂಲ ಗುರು. ಬಿಡಿಸಿದಷ್ಟು ತೆರೆದುಕೊಳ್ಳುವ ಶ್ರೀಕೃಷ್ಣ ಪರಮಾತ್ಮನ ಸಂದೇಶಗಳು ಸರ್ವಕಾಲ ಸತ್ಯ. ಶ್ರೀಕೃಷ್ಣನ ಬಾಲ ಲೀಲೆಗಳು ಜಗತ್ತನ್ನು ತಿದ್ದುವ ಸಾಂದರ್ಭಿಕ ಸಂದೇಶಗಳಾಗಿವೆ ಎಂದು ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಹೇಳಿದರು.
ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಅಂಗವಾಗಿ ಭಾನುವಾರ ಜರಗಿದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಬೇಳ ಸಹಕಾರಿ ಆಯುರ್ವೇದ ಡಿಸ್ಪೆನ್ಸರಿಯ ಆರೋಗ್ಯ ಅಧಿಕಾರಿ ಡಾ.ಜಯಶ್ರೀ ನಾಗರಾಜ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಖ್ಯಾತ ದಂತ ವೈದ್ಯೆ, ಉಮಾಮಹೇಶ್ವರಿ ಎ.ಎಸ್. ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಮತ್ತು ಧಾರ್ಮಿಕ ದತ್ತಿ ಇಲಾಖೆಯ ನಿವೃತ್ತ ಅಧಿಕಾರಿ ಉಮೇಶ್ ಅಟ್ಟೆಗೋಳಿ ಅವರನ್ನು ಅಭಿನಂದಿಸಲಾಯಿತು.
ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯಿಂದ ವಿವಿಧ ಬಾಲಗೋಕುಲದ ನೂರಾರು ಮಂದಿ ಮುದ್ದು ಕೃಷ್ಣ, ರಾಧೆ ವೇಷಧಾರಿಗಳ ಆಕರ್ಷಕ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದರು. ಬಳಿಕ ಮುದ್ದುಕೃಷ್ಣ ವೇಷ ಸ್ಪರ್ಧೆ ಜರಗಿತು. ಡಾ.ಉದಯ ಕುಮಾರ್ ಕೂಡ್ಲು ಬಳಗದವರಿಂದ ಸ್ಯಾಕ್ಸೋಫೆÇೀನ್ ವಾದನ, ನುರಿತ ಕಲಾವಿದರಿಂದ ಯಕ್ಷ ಗಾನಾರ್ಚನೆ ನಡೆಯಿತು. ಮಾಲತಿ ಜಗದೀಶ್ ಸ್ವಾಗತಿಸಿ, ವೇಣುಗೋಪಾಲ ಮಾಸ್ತರ್ ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.




.jpg)
