ಕಾಸರಗೋಡು : ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಕಾಞಂಗಾಡಿನ ರಾಷ್ಟ್ರೀಯ ಆರೋಗ್ಯ ಮಿಷನ್ ಸಮ್ಮೇಳನ ಸಭಾಂಗಣದಲ್ಲಿ ಜರುಗಿತು. ಕಾಞಂಗಾಡು ನಗರಸಭಾ ಅಧ್ಯಕ್ಷೆ ಸುಜಾತಾ ಕೆ.ವಿ ಉದ್ಘಾಟಿಸಿದರು.
ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ರಾಮದಾಸ್ ಎ. ವಿ. ಅಧ್ಯಕ್ಷತೆ ವಹಿಸಿದ್ದರು.ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮ ವ್ಯವಸ್ಥಾಪಕ ಡಾ. ಅರುಣ್ ಪಿ. ವಿ., ಹೈಯರ್ ಸೆಕೆಂಡರಿ ಫ್ರೆಂಡ್‍ಶಿಪ್ ಕ್ಲಬ್ ಜಿಲ್ಲಾ ಸಂಯೋಜಕ ಮೇಸನ್ ಕೆಉಪಸ್ಥಿತರಿದ್ದರು. ಜಿಲ್ಲಾ ಮಾಸ್ ಮೀಡಿಯಾ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಶಾಲಾ ಮಾನಸಿಕ ಆರೋಗ್ಯ ಯೋಜನಾ ಅಧಿಕಾರಿ ಹರ್ಷ ಟಿ.ಕೆ ವಂದಿಸಿದರು.
ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಅಂಗವಾಗಿ, ಜಿಲ್ಲೆಯ ಹೈಯರ್ ಸೆಕೆಂಡರಿ ಶಾಲಾ ಸ್ನೇಹ ಸಂಯೋಜಕ ಸಮಿತಿ ಸದಸ್ಯರಿಗಾಗಿ "ಆತ್ಮಹತ್ಯೆ ಮತ್ತು ಇದನ್ನು ತಡೆಗಟ್ಟುವ ಚಟುವಟಿಕೆಗಳು" ಎಂಬ ವಿಷಯದ ಕುರಿತು ಜಾಗೃತಿ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು. ಹದಿಹರೆಯದವರ ಮಾನಸಿಕ ಆರೋಗ್ಯ" ವಿಷಯದ ಕುರಿತು ಜಿಲ್ಲಾ ಮಾನಸಿಕ ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ಡಾ. ಅಪರ್ಣ ಕೆ. ಪಿ., ಮಡಿಕೈ ಕುಟುಂಬ ಆರೋಗ್ಯ ಕೇಂದ್ರದ ಸಹಾಯಕ ಶಸ್ತ್ರಚಿಕಿತ್ಸಕಿ ಮತ್ತು ಮನೋವೈದ್ಯೆ ಡಾ. ಶ್ರುತಿ ವಿ., "ಮೂಲ ಸಮಾಲೋಚನಾ ಕೌಶಲ್ಯಗಳು" ವಿಷಯದ ಕುರಿತು ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯ ಕ್ಲಿನಿಕಲ್ ಮನಶ್ಶಾಸ್ತ್ರಜ್ಞ ಅಲ್ಬಿನ್ ಎಲ್ದೋಸ್ ತರಗತಿ ನಡೆಸಿದರು.
ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್, ಜಿಲ್ಲೆಈ ಕಾರ್ಯಕ್ರಮವನ್ನು ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹೈಯರ್ ಸೆಕೆಂಡರಿ ಫ್ರೆಂಡ್‍ಶಿಪ್ ಕ್ಲಬ್ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿತ್ತು.





