ಬದಿಯಡ್ಕ: ಉದಯಗಿರಿ ಬಾಂಜತ್ತಡ್ಕ ವೃಂದಾವನ ಧಾರ್ಮಿಕ ಸಾಂಸ್ಕøತಿಕ ಸಮಿತಿಯ 12ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ವಿವಿಧ ಕಾರ್ಯಕ್ರಮಗಳೊಂದಿಗೆ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಪರಿಸರದಲ್ಲಿ ಸೆ.14 ರಂದು ಜರಗಲಿರುವುದು.
ಬೆಳಗ್ಗೆ 9ಕ್ಕೆ ಉದಯಗಿರಿ ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಭಟ್ ಬಿ. ಉದ್ಘಾಟಿಸಲಿದ್ದಾರೆ. ನಂತರ ಮಕ್ಕಳಿಗೆ, ಮಾತೆಯರಿಗೆ, ಯುವಕರಿಗೆ ವಿವಿಧ ಸ್ಪರ್ಧೆಗಳು ಜರಗಲಿವೆ. ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವೃಂದಾವನ ಧಾರ್ಮಿಕ ಸಾಂಸ್ಕøತಿಕ ಸಮಿತಿ ಸದಸ್ಯೆ ಬೇಬಿಶಾಲಿನಿ ಬಾಂಜತ್ತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ಪುತ್ತೂರು ವಿದಾನಸಭಾ ಕ್ಷೇತ್ರ ಉಪಾಧ್ಯಕ್ಷ ಹರಿಪ್ರಸಾದ ಯಾದವ್ ಪುತ್ತೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಇಕ್ಕೇರಿ ಶ್ರೀ ಶಂಕರನಾರಾಯಣ ದೇವಸ್ಥಾನದ ಅರ್ಚಕ ನಾರಾಯಣ ಭಟ್ಟರಿಗೆ ಗೌರವಾರ್ಪಣೆ ನಡೆಯಲಿದೆ. ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಅಧ್ಯಕ್ಷ ರವೀಶ್ ಕುಮಾರ್ ಸಿ.ಎಚ್., ರೇಶ್ಮಾ ಭಟ್ ಕೊಲ್ಲಂಪಾರೆ ಶುಭಾಶಂಸನೆಗೈಯ್ಯುವರು. ಉದಯಗಿರಿ ಶಾಲಾ ಅಧ್ಯಾಪಕ ನವೀನ್ ಕುಮಾರ್ ಬಿ. ಬಹುಮಾನ ವಿತರಿಸಲಿದ್ದಾರೆ. ಸಂಜೆ 6.30 ರಿಂದ ಶ್ರೀ ಶಬರಿಗಿರಿ ಅಯ್ಯಪ್ಪ ಸ್ವಾಮಿ ಮಹಿಳಾ ಭಜನಾ ಸಂಘ ಬದಿಯಡ್ಕ ಇವರಿಂದ ಭಜನೆ, 8.30ಕ್ಕೆ ಮಂಗಳಾರತಿ, 9ರಿಂದ ಕೈಲಾಸ್ ಡ್ಯಾನ್ಸ್ ಅಕಾಡೆಮಿ ಪೆರ್ಲ ಮತ್ತು ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಲಿದೆ.




