ಮಂಜೇಶ್ವರ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಹಾಗೂ ಮಹಾಸಭೆ ಮೀಯಪದವು ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಬಡಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ್ ಕುಮಾರ್ ಕೊಡ್ಲಮೊಗರು, ಉಪಾಧ್ಯಕ್ಷರುಗಳಾಗಿ ಕಾಯರ್ಕಟ್ಟೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶಿವರಾಮ ಭಟ್, ಉದ್ಯಾವರ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ಶಂಕರನಾರಾಯಣ ಭಟ್, ಕುಳೂರು ಶಾಲಾ ಮುಖ್ಯ ಶಿಕ್ಷಕಿ ಮಾಲತಿ, ಮಜುಬೈಲು ಶಾಲಾ ಮುಖ್ಯ ಶಿಕ್ಷಕ ಸುರೇಶ್ ಬಂಗೇರ, ಬಡಾಜೆ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ, ಮೂಡಂಬೈಲು ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ದಯಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಮೀಯಪದವು ಪ್ರೌಢ ಪ್ರಾಥಮಿಕ ಶಾಲೆಯ ಅಧ್ಯಾಪಕ ಸುನಿಲ್ ಕುಮಾರ್ ಎಂ., ಜೊತೆ ಕಾರ್ಯದರ್ಶಿಗಳಾಗಿ ಕುಂಜತ್ತೂರು ಶಾಲಾ ಶಿಕ್ಷಕ ದಿವಾಕರ ಬಲ್ಲಾಳ್, ಪೈವಳಿಕೆ ನಗರ ಶಾಲಾ ಮುಖ್ಯ ಶಿಕ್ಷಕ ಅಶ್ರಫ್ ಮತ್ರ್ಯ, ಪೆರ್ಮುದೆ ಶಾಲಾ ಶಿಕ್ಷಕ ಜಯಪ್ರಸಾದ್, ಮಜಿಬೈಲು ಶಾಲಾ ಶಿಕ್ಷಕ ದೇವಾನಂದ, ಆನೆಕಲ್ಲು ಶಾಲಾ ಶಿಕ್ಷಕಿ ರೇಖಾ, ಕೋಶಾಧಿಕಾರಿಯಾಗಿ ಶಿಕ್ಷಕ ಕಿಶೋರ್ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು. ಲೆಕ್ಕ ಪರಿಶೋಧಕರಾಗಿ ಬಾಕ್ರಬೈಲ್ ಪಾತೂರು ಶಾಲೆಯ ಶಿಕ್ಷಕ ಗಣೇಶ್ ಇವರನ್ನು ಆಯ್ಕೆ ಮಾಡಲಾಯಿತು. ಕನಿಯಾಲ ಶಾಲಾ ಮುಖ್ಯ ಶಿಕ್ಷಕಿ ಶೋಭಿತಾ ರಾಜೇಶ್, ಬಾಕ್ರಬೈಲು ಶಾಲಾ ಶಿಕ್ಷಕಿ ಶಕೀಲ, ವಿಶ್ವನಾಥ, ರಾಜೇಶ್, ಹರೀಶ್ ಕುಮಾರ್, ಕೃಷ್ಣಮೂರ್ತಿ, ವಿದ್ಯಾ ಪ್ರಸನ್ನ, ಅಜಿತ್ ಕೊಡ್ಲಮೊಗರು, ನೀತಾ, ಮೆಲ್ವಿನ್, ಗುರುರಾಜ್, ಸದಾಶಿವ ಬಾಲಮಿತ್ರ, ಮಾಲತಿ, ನಯನ ಪ್ರಸಾದ್, ಕೃಷ್ಣ ನಾಯ್ಕ, ಗೋಪಿ, ನಿಶಿತ್ ಐಲ, ಸಿದ್ದಿಕ್, ಜ್ಯೋತಿಲಕ್ಷ್ಮಿ, ರಾಜೇಶ್ ಕಳಿಯೂರು, ರಾಜರಾಮ್, ಕು. ಧನ್ಯಶ್ರೀ, ಸದಸ್ಯರನ್ನೊಳಗೊಂಡ ಕಾರ್ಯಾಕಾರೀ ಸಮಿತಿಯನ್ನು ರಚಿಸಲಾಯಿತು. ಕೇಂದ್ರ ಸಮಿತಿಯ ಸದಸ್ಯರಾಗಿ ಸುಕೇಶ್, ಜಯರಾಮ ಸಿ.ಎಚ್., ಜಯಪ್ರಶಾಂತ್ ಪಿ, ಶ್ರೀರಾಮ ಕೆದುಕೋಡಿ, ಜೀವನ್ ಕುಮಾರ್ ಪಿ. ಇವರನ್ನು ಆಯ್ಕೆ ಮಾಡಲಾಯಿತು. ವಿಶೇಷ ಆಹ್ವಾನಿತರಾಗಿ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತಾ, ಚಂದ್ರಕಾಂತ, ಉಮೇಶ ಕೆ., ಜಬ್ಬಾರ್ ಬಿ., ಕವಿತಾ ಕೂಡ್ಲು ಇವರನ್ನು ಆಯ್ಕೆ ಮಾಡಲಾಯಿತು. ಕಾಲೇಜು ಪ್ರತಿನಿಧಿಯಾಗಿ ಮಂಜೇಶ್ವರ ಗೋವಿಂದ ಪೈ ಕಾಲೇಜು ಪ್ರಾಧ್ಯಾಪಕ ಶಿವಶಂಕರ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರತಿಯೊಂದು ಪಂಚಾಯತಿನ ಜವಾಬ್ದಾರಿಗಳನ್ನು ಅಧ್ಯಾಪಕರಿಗೆ ಹಂಚಲಾಯಿತು. ಅಶ್ರಫ್ ಮತ್ರ್ಯ ಪೈವಳಿಕೆ, ದಿವಾಕರ ಬಲ್ಲಾಳ್ ಮಂಜೇಶ್ವರ, ಜೀವನ್ ಕುಮಾರ್ ವರ್ಕಾಡಿ, ರೂಪೇಶ್ ಎನ್. ಮೀಂಜ, ಜಯಶ್ರೀ ಮಂಗಲ್ಪಾಡಿ ಹಾಗೂ ವಸಂತ ಬಿ. ಇವರಿಗೆ ನೋನ್ ಪಿ.ಇ.ಸಿ. ಶಾಲೆಗಳ ಜವಾಬ್ದಾರಿಗಳನ್ನು ನೀಡಲಾಯಿತು.


