ಮಂಜೇಶ್ವರ: ವರ್ಕಾಡಿ ಪಾವೂರು ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆ ಅಂಗವಾಗಿ ಗುರು ಪೂಜೆಯನ್ನು ಮುಡಿಮಾರ್ ಶ್ರೀ ಮಲರಾಯ ಗುಳಿಗ ದೈವಸ್ಥಾನದ ವಠಾರದಲ್ಲಿ ಏರ್ಪಡಿಸಲಾಗಿತ್ತು.
ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಜಿಲ್ಲಾಧ್ಯಕ್ಷ ಕೃಷ್ಣ ಶಿವಕೃಪ ಶ್ರೀಗುರು ನೀಡಿದರು. ಅರಿಬೈಲು ಬರುವ ಜುಮಾದಿ ದೈವಸ್ಥಾನದ ಅರ್ಚಕ ಅರಸ ಪೂಜಾರಿ ಕುದುಕೋರಿ, ಮುಡಿಮಾರ್ ಮಲರಾಯ ಕ್ಷೇತ್ರದ ಅರ್ಚಕ ಚಂದ್ರಹಾಸ ಪೂಜಾರಿ ಮುಡಿಮಾರು, ಜಿಲ್ಲಾ ವೇದಿಕೆ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಬಡಾಜೆ, ಕೋಶಾಧಿಕಾರಿ ರವೀಂದ್ರ ಪೂಜಾರಿ ಭಂಡಾರ ಮನೆ ಕಡಂಬಾರು, ಮುಂಡಪ್ಪ ಪೂಜಾರಿ ಕೆದುಂಬಾಡಿ, ಶಶಿಕಲಾ ಉದಯಕುಮಾರ್ ಅಳಪೆ, ಯುವ ವಏದಿಕೆಯ ವೇದಿಕೆಯ ನವೀನ್ ಮುಡಿಮಾರು, ಉಮೇಶ್ ಸುವರ್ಣ ಮುಡಿಮಾರ್ ಮೊದಲಾದವರು ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷ ರವಿಮುಡಿಮಾರ್ ಸ್ವಾಗತಿಸಿದರು. ಮಾಧವ ಪೂಜಾರಿ ಕುದುಕೋರಿ ವಂದಿಸಿದರು.





