ಕಾಸರಗೋಡು: ಎಡನೀರು ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಐದನೇ ವರ್ಷದ ಆರಾಧನಾ ಮಹೋತ್ಸವ ಗುರುವಾರ ಶ್ರೀ ಮಠದಲ್ಲಿ ಜರುಗಿತು. ಬೆಳಗ್ಗೆ ನಡೆದ ವೃಂದಾವನ ಪೂಜೆಯನ್ನು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನೆರವೇರಿಸಿದರು. ಬೆಳಗ್ಗೆ ಧ್ವಜಾರೋಹಣದ ನಂತರ ಅಖಿಲ ಭಾರತ ಕುಟುಂಬ ಪ್ರಬೋಧಕ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಆಶಯ ಭಾಷಣ ಮಾಡಿದರು. ಈ ಸಂದರ್ಭ ನಡೆದ ವೇಣುವಾದನ ಕಾರ್ಯಕ್ರಮದಲ್ಲಿ ವಿದ್ವಾನ್ ಎಂ. ಕೆ ಪ್ರಾಣೇಶ್ ಅವರಿಂದ ವೇಣುವಾದನ ನಡೆಯಿತು. ವಿದ್ವಾನ್ ಜರ್ನಾನ್ ಶ್ರೀನಾಥ್ ವಯಲಿನ್, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮೃದಂಗ, ವಿದ್ವಾನ್ ಗುರುಪ್ರಸನ್ನ ಖಂಜರಿ, ವಿದ್ವಾನ್ ಬೆಂಗಳೂರು ರಾಜಶೇಖರ ಮೋರ್ಸಿಂಗ್‍ನಲ್ಲಿ ಸಹಕರಿಸಿದರು. ಮಹಾಪೂಜೆಯೊಂದಿಗೆ ಶ್ರೀಗಳಿಂದ ಮಂತ್ರಾಕ್ಷತೆ ವಿತರಣೆ ನಡೆಯಿತು.





