ಜೆರುಸಲೇಂ: ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ ಶರಣಾಗದಿದ್ದರೆ ಸರ್ವನಾಶವಾಗಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸೋಮವಾರ ಎಚ್ಚರಿಕೆ ನೀಡಿದ್ದು ಗಾಝಾ ನಗರದಲ್ಲಿ ಪ್ರಮುಖ ಕಾರ್ಯಾಚರಣೆಯ ಸುಳಿವು ನೀಡಿದ್ದಾರೆ.
ಗಾಝಾಕ್ಕೆ ಇವತ್ತು ಪ್ರಬಲ ಚಂಡಮಾರುತ ಅಪ್ಪಳಿಸಲಿದ್ದು ಗಾಝಾ ನಾಶವಾಗಲಿದೆ.
ಗಾಝಾ ನಗರದ ಆಕಾಶಕ್ಕೆ ಅಪ್ಪಳಿಸಲಿರುವ ಚಂಡಮಾರುತದಿಂದ ಹಮಾಸ್ ಕುಸಿದು ಬೀಳಲಿದೆ. ಇದು ಗಾಝಾದಲ್ಲಿರುವ ಮತ್ತು ವಿದೇಶದಲ್ಲಿ ಐಷಾರಾಮಿ ಹೋಟೆಲ್ ನಲ್ಲಿರುವ ಹಮಾಸ್ ಸದಸ್ಯರಿಗೆ ಇಸ್ರೇಲ್ ನೀಡುತ್ತಿರುವ ಕೊನೆಯ ಎಚ್ಚರಿಕೆಯಾಗಿದೆ. ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿ ನಿಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಶರಣಾಗಿ. ಇಲ್ಲದಿದ್ದರೆ ಗಾಝಾದ ಜೊತೆ ನೀವು ಕೂಡಾ ನಾಶವಾಗುತ್ತೀರಿ' ಎಂದು ಕಾಟ್ಜ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.




