ಕೋಝಿಕೋಡ್: ಕೇರಳದಲ್ಲಿ ಗುರು ಪೂಜೆ ಮತ್ತು ಭಾರತ ಮಾತೆಯನ್ನು ವಿರೋಧಿಸುವವರು ಶಬರಿಮಲೆ ಭಕ್ತರಂತೆ ನಟಿಸುತ್ತಿದ್ದಾರೆ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದ್ದಾರೆ.
ಅಂತಹ ಮನೋಭಾವ ನಿಜವಾಗಿಯೂ ಅವರ ಮನಸ್ಸಿನಲ್ಲಿದ್ದರೆ, ಅವರು ಜನರಿಗೆ ಬಹಿರಂಗವಾಗಿ ಏಕೆ ಹೇಳುತ್ತಿಲ್ಲ?
ರಾಜಕೀಯ ಲಾಭಕ್ಕಾಗಿ ಅವರು ಇದನ್ನೆಲ್ಲ ಮಾಡುತ್ತಿದ್ದಾರೆಯೇ ಎಂದು ರಾಜ್ಯಪಾಲರು ಕೇಳಿದರು. ಜನರು ಎಲ್ಲವನ್ನೂ ನೋಡುತ್ತಿದ್ದಾರೆ.
ಭಾರತ ಮಾತೆ ಮತ್ತು ಗುರು ಪೂಜೆ ರಾಜಕೀಯವಲ್ಲ ಎಂದು ರಾಜ್ಯಪಾಲರು ಹೇಳಿದರು. ಇದು ರಕ್ತದೊಂದಿಗೆ ಬೆರೆತ ಸಂಸ್ಕøತಿ ಎಂದು ರಾಜ್ಯಪಾಲರು ಕೋಝಿಕೋಡ್ ನವರಾತ್ರಿ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸುತ್ತಾ ಹೇಳಿದರು.




