ಕಾಸರಗೋಡು: ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ಸಾರಥ್ಯದ ಕನ್ನಡ ಭವನ ಪ್ರಕಾಶನದ ಒಂಬತ್ತನೇ ಕೃತಿ "ಆದರ್ಶ ಮಹಿಳೆ ಗಾಯತ್ರಿ ನಾಗೇಶ್ "ಎಂಬ ವ್ಯಕ್ತಿ ಚಿತ್ರಣ ಕೃತಿ ಬಿಡುಗಡೆ ಸಮಾರಂಭ ಮಂಗಳೂರಿನ ಶರವು ದೇವಸ್ಥಾನ ಸನಿಹದ ಬಳಿಯ ಬಾಳಮ್ ಭಟ್ ಸಭಾಂಗಣದಲ್ಲಿ ಜರುಗಿತು. ಕಾಸರಗೋಡು ಕನ್ನಡ ಭವನ ಪ್ರಕಾಶನದ ಸಂಸ್ಥಾಪಕಿ ಸಂಧ್ಯಾ ರಾಣಿ ಟೀಚರ್ ರಚಿಸಿದ ಕೃತಿಯನ್ನು ಡಾ. ಶಿವಾನಂದ ಬೇಕಲ್ ಲೋಕಾರ್ಪಣೆಗೊಳಿಸಿದರು
ಮಂಗಳೂರು ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಮುರಳಿಧರ ಸಿ ಎಚ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ ರವಿ ಅಲೆವೂರಾಯ ವೆಂಕಟೇಶ ಜೆಪ್ಪು, ಯೋಗೀಶ್ ಕುಮಾರ್ ಜೆಪ್ಪು, ಮಹಿಳಾ ವೃಂದದ ಕಾರ್ಯದರ್ಶಿ ಪೂರ್ಣಿಮಾ ಶಾಮ್ ಸುಂದರ್, ಸಂಧ್ಯಾರಾಣಿ ಟೀಚರ್, ಡಾ. ವಾಮನ್ ರಾವ್ ಬೇಕಲ್, ನಿರಂಜನ್ ಕೊರಕೋಡು, ನರಸಿಂಹ ಮಂಗಳೂರು ಉಪಸ್ಥಿತರಿದ್ದರು.
ರೇಖಾ ಸುದೇಶ್ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಫಿಸಿದರು. ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಉಮೇಶ್ ರಾವ್ ಕುಂಬಳೆ ವಂದಿಸಿದರು. ಕಾರ್ಯಕ್ರಮದ ಅಂಗವವಾಗಿ ಯಕ್ಷ ಪ್ರವಚನ ನಡೆಯಿತು.





