ಬದಿಯಡ್ಕ: ಮುಂಡಿತ್ತಡ್ಕ ಸನಿಹದ ಗುಣಾಜೆ ಎಂಬಲ್ಲಿರುವ ನಾಗ ಬನಕ್ಕೆ ಕಿಡಿಗೇಡಿಗಳು ಹಾನಿಗೊಳಿಸಿ ಅಪವಿತ್ರಗೊಳಿಸಿದ್ದಾರೆ. ನಾಗನಕಟ್ಟೆಯಲ್ಲಿನ ಗುಳಿಗನ ಕಟ್ಟೆಗೆ ಕಲ್ಲೆಸೆದು ಹಾನಿಗೊಳಿಸಲಾಗಿದೆ. ಅಲ್ಲದೆ ನಾಗನಕಟ್ಟೆ ಸನಿಹದ ಕಾಣಿಕೆ ಹುಂಡಿಯಲ್ಲಿನ ನಾಗನ ಚಿತ್ರವನ್ನೂ ಹಾನಿಗೊಳಿಸಲಾಗಿದೆ.ಸೋಮವಾರ ರಾತ್ರಿ ಕೃತ್ಯ ನಡೆದಿರಬೇಕೆಂದು ಸಂಶಯಿಸಲಾಗಿದ್ದು, ಮಂಗಳವಾರ ಸ್ಥಳೀಯರ ಗಮನಕ್ಕೆ ಬಂದಿತ್ತು.




