ಕಾಸರಗೋಡು: ರಾಷ್ಟ್ರೀಯ ವಿಶ್ವಕರ್ಮ ಫೆಡರೇಸನ್(ಎನ್‍ವಿಎಫ್) ವತಿಯಿಂದ ವಿಶ್ವಕರ್ಮ ದಿನಾಚರಣೆ ಕಾಸರಗೋಡಿನಲ್ಲಿ ನಡೆಯಿತು. ಎನ್‍ವಿಎಫ್ ರಾಷ್ಟ್ರೀಯ ಅಧ್ಯಕ್ಷ ಸೀತಾರಾಮ ಆಚಾರ್ಯ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ವಿಷ್ಣು ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.
ಭಾರತದ ವಿಶ್ವಕರ್ಮರ ಹಕ್ಕುಗಳನ್ನು ಸಂಘಟನಾಶಕ್ತಿಯ ಮೂಲಕ ಸಾಧಿಸಲು ಮತ್ತು ಸಾಂಪ್ರದಾಯಿಕವಾಗಿ ರೂಪುಗೊಂಡ ದೈವಿಕÀಕುಲಕಸುಬುಗಳನ್ನು ಅದೇರೀತಿಯಲ್ಲಿ Pಪಾಡಿಕೊಳ್ಳುವ ಮೂಲಕ ವಿಶ್ವಕರ್ಮಸಮುದಾಯವನ್ನು ಎಲ್ಲಾ ಹಂತಗಳಲ್ಲಿಯೂ ಉನ್ನತೀಕರಿಸುವ ನಿಟ್ಟನಲ್ಲಿ 2010ರಲ್ಲಿ ಎನ್‍ವಿಎಫ್ ಸಂಘಟನೆಯನ್ನು ಕಾಸರಗೋಡಿನಲ್ಲಿ ರಚಿಸಲಾಗಿದೆ.
ಈ ಸಂದರ್ಭ ಸಂಘಟನೆ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. ಕೇಂದ್ರ ಸರ್ಕಾರವು ಸೆಪ್ಟೆಂಬರ್ 17ರಂದು ನಿರ್ಬಂಧಿತ ರಜಾದಿನವೆಂದು ಘೋಷಿಸಿದ್ದು, ಇದನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಬೇಕು, ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು, ಕರಕುಶಲ ಅಭಿವೃದ್ಧಿ ನಿಗಮ ಮತ್ತು ಕುಶಲ ಕರ್ಮಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ವಿಶ್ವಕರ್ಮರಿಗೆ ನೀಡಬೇಕು, ದೇವಸ್ವಂ ಮಂಡಳಿಗಳ ಅಧ್ಯಕ್ಷ ಸ್ಥಾನ ಮತ್ತುದೇವಾಲಯ ಸಮಿತಿಗಳಲ್ಲಿ ಸಾಕಷ್ಟು ಸ್ಥಾನ ಮತ್ತುಪ್ರಾತಿನಿಧ್ಯವನ್ನು ವಿಶ್ವಕರ್ಮರಿಗೆ ನೀಡಬೇಕು, ಶೈಕ್ಷಣಿಕ ವಲಯದಲ್ಲಿ, ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗಗಳಲ್ಲಿ, ವಿಶ್ವಕರ್ಮ ಕುಲದವರಿಗೆ ಮಾತ್ರ ಶೇ.10 ಮೀಸಲಾತಿ ನೀಡಬೇಕು, ವಿಶ್ವಕರ್ಮರ ನೇತೃತ್ವದಲ್ಲಿ ಪರಂಪರೆ ಮತ್ತುಶೈಕ್ಷಣಿಕ ಮತ್ತು ತಾಂತ್ರಿಕ ಸಂಸ್ಥೆಗಳ ನಿರ್ಮಾಣ,ವಾಸ್ತುಶಿಲ್ಪ ಅಕಾಡೆಮಿಗಳ ನಿರ್ಮಾಣಕ್ಕಾಗಿ ಅಗತ್ಯ ಭೂಮಿಮತ್ತು ಆರ್ಥಿಕ ಸಹಾಯವನ್ನು ಒದಗಿಸಬೇಕು, 55 ವರ್ಷ ಪೂರೈಸಿದ ಎಲ್ಲಾ ಕುಶಲ ಕರ್ಮಿಗಳಿಗೆ ಮಾಸಿಕ 5,000ರೂ. ಪಿಂಚಣಿ ನೀಡಬೇಕು, ಆಡಳಿತಾಧಿಕಾರಿಗಳು ಜಾರಿಗೆ ತರಲು ಹಿಂಜರಿಯುತ್ತಿರುವ ಜಾತಿ ಜನಗಣತಿಯನ್ನು ಜಾರಿಗೆ ತರಬೇಕು, ಪಿ.ಎಂ. ವಿಶ್ವಕರ್ಮ ಯೋಜನೆಯ ಚಟುವಟಿಕೆಗಳನ್ನು ಸರ್ಕಾರಿ ಮಟ್ಟದಲ್ಲಿ ಪುನಃ ಜಾರಿಗೆ ತರುವಂತೆ ಆಗ್ರಹಿಸಲಾಯಿತು.
ರಾಷ್ಟ್ರೀಯಪ್ರಧಾನ ಕಾರ್ಯದರ್ಶಿ ರಾಘವನ್ ಕೊಳತ್ತೂರು ದಿಕ್ಸೂಚಿಭಾಷಣ ಮಾಡಿದರು. ವಸಂತಿ ಜೆ. ಆಚಾರ್ಯ, ಸುಭಾಷ್ ಚಂದ್ರನ್,ರಾಮಕೃಷ್ಣನ್, ಶಾಜಿ ವೆಳ್ಳರಿಕುಂಡ್, ಸುಜಾತಾ, ವಿಜಯ ಬೇಡಗಂ ಉಪಸ್ಥಿತರಿದ್ದರು. ಎನ್.ವಿ.ಎಫ್. ಜಿಲ್ಲಾ ಕಾರ್ಯದರ್ಶಿ ನಿಶಾಚಂದ್ರನ್ ಸ್ವಾಗತಿಸಿ, ಜಯಶೀಲನ್ ವಂದಿಸಿದರು.





