ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಳೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಣ ಗುತ್ತಿಗೆದಾರ ಉರಾಲುಂಗಲ್ ಕಾರ್ಮಿಕ ಸೇವಾ ಸಹಕಾರಿ ಸಂಸ್ಥೆಯ ನಿರ್ಲಕ್ಷ್ಯ ಧೊರಣೆ ಖಂಡನೀಯವಾಗಿದ್ದು, ಇದರ ಅಧಿಕಾರಿಗಳ ವಿರುದ್ಧ ನರಹತ್ಯೆ ಬಗ್ಗೆ ಕೇಸುದಾಖಲಿಸಿ ಅವರನ್ನುಬಂಧಿಸುವಂತೆ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್ ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಹಲವು ಸಮಯದಿಂದ ಷಟ್ಪಥ ಕಾಮಗಾರಿಯಲ್ಲಿ ಊರಾಲುಂಗಳ್ ಸಂಸ್ಥೆ ತೋರಿದ ನಿರ್ಲಕ್ಷ್ಯ ಧೋರಣೆಯಿಂದ ಹಲವರು ಬಲಿಯಾಗಬೇಕಾಗಿ ಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವಾಗ ಕ್ರೇನ್ ಕುಸಿದು ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ. ಸುರಕ್ಷತಾ ಮುನ್ನೆಚ್ಚರಿಕೆ ಕೈಗೊಳ್ಳುತ್ತಿದ್ದರೆ, ಎರಡು ಜೀವಗಳನ್ನು ಉಳಿಸಿಕೊಳ್ಳಬಹುದಾಗಿತ್ತು. ರಾಜ್ಯ ಸರ್ಕಾರದಿಂದ ಎ-ಗ್ರೇಡ್ ಅನುಮೋದನೆ ಪಡೆದ ಸಂಸ್ಥೆಯಲ್ಲಿ ಇಂತಹ ಭದ್ರತಾ ಲೋಪವು ಕಂಪನಿಯ ಕಾರ್ಯಾಚರಣೆಯ ಸಾಮಥ್ರ್ಯದ ಬಗ್ಗೆ ಅನುಮಾನ ಹುಟ್ಟುಹಾಕುತ್ತಿದೆ ಎಂದು ಅಶ್ವಿನಿ ತಿಳಿಸಿದ್ದಾರೆ.





