ಮಂಜೇಶ್ವರ: ಮಂಜೇಶ್ವರ ಪೆÇಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಕೊಡ್ಲಮೊಗರಿನ ಸುಳ್ಯಮೆಯ ಮನೆಯೊಂದರ ಸನಿಹದ ಶೆಡ್ಡಿನಲ್ಲಿ ದಾಸ್ತಾನಿರಿಸಿದ್ದ 116ಕಿ.ಗ್ರಾಂ ಗಾಂಜಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸಿದ್ದೆನ್ನಲಾದ ಮಿನಿ ಲಾರಿಯೊಂದನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಾರೀ ಪ್ರಮಾಣದ ಗಾಂಜಾ ದಾಸ್ತಾನಿರಿಸಿರುವ ಬಗ್ಗೆ ಪೊಲೀಸರಿಗೆ ಲಭಿಸಿದ ಗುಪ್ತ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಲಾಗಿದೆ
ಎಎಸ್‍ಪಿ ನಂದಗೋಪನ್ ಅವರಿಗೆ ಲಭಿಸಿದ ಮಾಹಿತಿಯನ್ವಯ ಮಂಜೇಶ್ವರ ಆಣೆ ಇನ್ಸ್‍ಪೆಕ್ಟರ್ ಇ. ಅನೂಪ್‍ಕುಮಾರ್, ಎಸ್.ಐ ಕೆ.ಆರ್ ಉಮೇಶ್ ನೇತೃತ್ವದ ಪೊಲೀಸರ ತಂಡ ಬುಧವಾರ ನಸುಕಿನ 1ಗಂಟೆಗೆ ಕಾರ್ಯಾಚಣೆ ನಡೆಸಿದೆ. ದಾಸ್ತಾನಿರಿಸಿದ್ದ ಗಾಂಜಾವನ್ನು ಬೇರೆ ಪ್ರದೇಶಕ್ಕೆ ಸಾಗಿಸುವ ಯೋಜನೆಯಿರಿಸಿಕೊಂಡಿದ್ದರೆಂದು ಸಂಶಯಿಸಲಾಗಿದೆ. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.




