ಮಂಜೇಶ್ವರ : ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜತ್ತೂರಿನಿಂದ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಜೀರ್ಣಗೊಂಡ ಸ್ಥಿತಿಯಲ್ಲಿ ತಲಪ್ಪಾಡಿಯ ಫಾರ್ಮ್ ಒಂದರಲ್ಲಿ ಪತ್ತೆಯಾಗಿದೆ. ಕುಂಜತ್ತೂರಿನ ಫ್ಲೈವುಡ್ ಕಾರ್ಖಾನೆಯಲ್ಲಿ ನೌಕರನಾಗಿದ್ದ, ಬಿಹಾರ ನಿವಾಸಿ ರಾಹುಲ್(26)ಮೃತವ್ಯಕ್ತಿ. ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿರಬೇಕೆಂದು ಸಂಶಯಿಸಲಾಗಿದೆ. ದೇಹ ಸಂಪೂರ್ಣ ಜೀರ್ಣಗೊಂಡಿದ್ದು, ರುಂಡ, ಮುಂಡದಿಂದ ಬೇರ್ಪಟ್ಟ ಸ್ಥಿತಿಯಲ್ಲಿತ್ತು. ಸನಿಹ ಪತ್ತೆಯಾಗಿದ್ದ ಮೊಬೈಲ್ ತಪಾಸಣೆ ನಡೆಸಿದಾಗ ಮೃತದೇಹದ ಗುರುತು ಲಭ್ಯವಾಗಿದೆ. ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಹುಲ್ ಆ. 7ರಿಂದ ನಾಪತ್ತೆಯಾಗಿದ್ದನು. ಈ ಬಗ್ಗೆ ಈತನ ಸಹೋದರ ವಿಶಾಲ್‍ಕುಮಾರ್ ಮಂಜೇಶ್ವರ ಠಾಣೆ ಪೊಲೀಸರಿಗೆ ನೀಡಿದ ದೂರಿನನ್ವಯ ಹುಡುಕಾಟ ನಡೆಸಿದ್ದರೂ, ಮಾಹಿತಿ ಲಭ್ಯವಾಗಿರಲಿಲ್ಲ.




