ಕಾಸರಗೋಡು: ಕೋಟೆಕಣಿಯ ಶ್ರೀರಾಮನಾಥ ಸಾಂಸ್ಕøತಿಕ ಭವನದಿಂದ 'ಕಾಸರಗೋಡು ದಸರಾ-2025' ಸಂಪನ್ನ ಹಾಗೂ 'ದಸರೋತ್ಸವ'ಕಾರ್ಯಕ್ರಮ ಅ. 12ರಂದು ಮಧ್ಯಾಹ್ನ 2ಗಂಟೆಗೆ ಶ್ರೀರಾಮನಾಥ ಸಾಂಸ್ಕøತಿಕ ಭವನದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂಗವಾಘಿ ದಿವಾಕರ ಅಶೋಕನಗರ, ವಸಂತ ಶೆಟ್ಟಿ ಸಊರ್ಲು, ಕಾವ್ಯಾ ಕುಶಲ ಅವರಿಂದ ದೇವರ ನಾಮಾವಳಿ ನಡೆಯುವುದು. ಸಂಜೆ 4ಕ್ಕೆ ನಡೆಯುವ ಸಮಾರಂಭದಲ್ಲಿ ರಂಗಪುತ್ಥಳಿ ಯಶೋಧಾ ಪಪ್ಪೆಟ್ರಿ ಸಂಸ್ಥಾಪಕ ಅಧ್ಯಕ್ಷ ಡಾ. ಯಶೋಧಾ ಶಶಿಧರ್ ತಮಟೆ ಬಾರಿಸುವ ಮೂಲಕ ದಸರಾ ಸಂಪನ್ನ ಹಾಡುವರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭ ನಾಟ್ಯರಂಗ ಪುತ್ತೂರಿನ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಾಗೂ ರಂಗಭೂಮಿ ಕಲಾವಿದೆ ಜಯಶ್ರೀ ದಿವಾಕರ್ ಅವರನ್ನು ಗೌರವಿಸಲಾಗುವುದು. ಬೆಂಗಳೂರು ತಂಡದವರಿಂದ ಗೀತಾ ಮಾಧುರ್ಯ ನಡೆಯುವುದು. ಅಂತಾರಾಷ್ಟ್ರೀಯ ಖ್ಯಾತಿಯ ಬೊಂಬೆಯಾಟ ಕಲಾವಿದ ಕೆ.ವಿ ರಮೇಶ್ ಅತಿಥಿಯಾಗಿ ಭಾಗವಹಿಸುವರು.
'ವಿಶ್ವ ಕಲಾಮೃತ' ಕೊಂಡೆವೂರು ಸಹೋದರಿಯರಿಂದ ವಯಲಿನ್ ವಾದನ, ರಂಗಪುತ್ಥಳಿ ಯಶೋಧಾ ಪಪ್ಪೆಟ್ರಿ ತಂಡದಿಂದ ತೊಗಲು ಬೊಂಬೆಯಾಟ ನಡೆಯುವುದು.





