ಕುಂಬಳೆ: ಸೀತಾಂಗೋಳಿ ಪೇಟೆಯಲ್ಲಿ ಬದಿಯಡ್ಕ ನಿವಾಸಿ ಅನಿಲ್‍ಕುಮಾರ್ ಯಾನೆ ಕುಟ್ಟನ್ ಎಂಬವರನ್ನು ಇರಿದು ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ನಾಲ್ವರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುದ್ರೆಪ್ಪಾಡಿ ನಿವಾಸಿಗಳಾದ ಮಹೇಶ್, ರಜೀಶ್ ಅಲಿಯಾಸ್ ಮೋನು, ಅಜಿತ್ ಕುಮಾರ್ ಹಾಗೂ ಹರಿಕೃಷ್ಣನ್ ಬಂಧಿತರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ ವಿಜಯಭಾರತ್ ರೆಡ್ಡಿ ಅವರ ನಿರ್ದೇಶ ಪ್ರಕಾರ ಎಎಸ್‍ಪಿ ನಂದಗೋಪಾಲ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ನೀರ್ಚಾಲು ಬೇಳ ಚೌಕಾರು ನಿವಾಸಿ ಅಕ್ಷಯ್(34)ಎಂಬಾತನನ್ನು ಈಗಾಘಲೇ ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ತಂಡದಲ್ಲಿ 13ಮಂದಿ ಆರೋಪಿಗಳಿದ್ದಾರೆ. ಬದಿಯಡ್ಕ ಪೇಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದ ಅನಿಲ್‍ಕುಮಾರ್ ಅವರನ್ನು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮಾತುಕತೆ ನಡೆಸಲು ಭಾನುವಾರ ತಡರಾತ್ರಿ ಸೀತಾಂಗೋಳಿಗೆ ಕರೆಸಿಕೊಂಡಿದ್ದ ತಂಡ ಮಾರಕಾಯುಧದಿಂದ ಇರಿದು ಕೊಲೆಗೆ ಯತ್ನಿಸಿತ್ತು.




