ಮಂಜೇಶ್ವರ : ಅವಿವಾಹಿತ ಯುವತಿ ಮಗುವಿಗೆ ಜನ್ಮನೀಡಿದ ಪ್ರಕರಣದಲ್ಲಿ ಯುವಕನ ಡಿಎನ್‍ಎ ತಪಾಸಣೆಯಿಂದ ನೆಗೆಟಿವ್ ಫಲಿತಾಂಶ ಲಭಿಸಿರುವ ಹಿನ್ನೆಲೆಯಲ್ಲಿ, ಯುವತಿಯ ಹೇಳಿಕೆ ಪ್ರಕಾರ ಮತ್ತೊಬ್ಬ ಯುವಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018 ರಲ್ಲಿ ಪ್ರಕರಣ ನಡೆದಿದ್ದು, ತನ್ನ ಮಗುವಿನ ಜನ್ಮಕ್ಕೆ ಕಾರಣನಾಗಿರುವ ಯುವಕನ ಬಗ್ಗೆ ನೀಡಿದ ಮಾಹಿತಿಯನ್ವಯ ಪೊಲೀಸರು ಕೇಸು ದಾಖಲಿಸಿಕೊಂಡು, ವೈಜ್ಞಾನಿಕವಾಗಿ ಸಾಬೀತುಪಡಿಸುವ ನಿಟ್ಟಿನಲ್ಲಿ ಈತನ ಹಾಗೂ ಮಗುವಿನ ಡಿಎನ್‍ಎ ತಪಾಸಣೆ ನಡೆಸಿದಾಗ ಫಲಿತಾಂಶ ನೆಗೆಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ಯುವತಿಯಿಂದ ಮತ್ತೊಮ್ಮೆ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದು, ಈ ಸಂದರ್ಭ ಬೇರೊಬ್ಬ ಯುವಕನ ಹೆಸರು ನೀಡಿರುವುದರಿಂದ ಆ ಯುವಕನ ವಿರುದ್ಧ ಕೇಸು ದಾಖಲಿಸಿಕೊಂಡು, ಆತನ ಡಿಎನ್‍ಎ ತಪಾಸಣೆಗೆ ಮುಂದಾಗಿದ್ದಾರೆ.




