HEALTH TIPS

ಜಿಲ್ಲೆಯ 1261 ಪೆÇೀಲಿಯೊ ಬೂತ್‍ಗಳಲ್ಲಿ ಪೋಲಿಯೋ ಲಸಿಕೆ ವಿತರಣೆ

ಕಾಸರಗೋಡು: ಪೆÇೀಲಿಯೊ ಲಸಿಕೆ ವಿತರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಪಳ್ಳಿಕೆರೆ ಕುಟುಂಬ ಆರೋಗ್ಯ ಕೇಂದ್ರದಲ್ಲಿ  ಶಾಸಕ ಸಿ.ಎಚ್ ಕುಞಂಬು ನೆರವೇರಿಸಿದರು. ಪಳ್ಳಿಕ್ಕರ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕುಮಾರನ್ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಉಪ ಡಿಎಂಒ ಡಾ. ಸಂತೋಷ್ ಬಿ. ಮುಖ್ಯ ಭಾಷಣ ಮಾಡಿದರು. ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಆಶ್ರಯದಲ್ಲಿ, ಐಎಂಎ, ಐಎಪಿ ಮತ್ತು ರೋಟರಿ ಸಹಯೋಗದೊಂದಿಗೆ ಕಾರ್ಯಕ್ರಮ  ಆಯೋಜಿಸಲಾಗಿತ್ತು. 

ಪೆÇೀಲಿಯೊಮೈಲಿಟಿಸ್ ಎಂಬ ಕಾಯಿಲೆಯು ಮುಖ್ಯವಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಮತ್ತು ಶಾಶ್ವತ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು, ಇದನ್ನು ತಡೆಗಟ್ಟಲು ಪೆÇೀಲಿಯೊ ಹನಿಗಳನ್ನು ನೀಡಲಾಗುತ್ತದೆ.  ಅಂಗನವಾಡಿಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು, ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳು ಸೇರಿದಂತೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪೋಲಿಯೋ ಲಸಿಕೆ ವಿತರಣಾ ಬೂತ್‍ಗಳನ್ನು ಸ್ಥಾಪಿಸಲಾಗಿತ್ತು. ಇದಲ್ಲದೆ,  ಅತಿಥಿ ರಾಜ್ಯ ಕಾರ್ಮಿಕರ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಮೊಬೈಲ್ ಬೂತ್‍ಗಳನ್ನು ಸ್ಥಾಪಿಸಲಾಗಿತ್ತು.

ಪಳ್ಳಿಕೆರೆ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎ ಮಣಿಕಂಠನ್, ವಾರ್ಡ್ ಸದಸ್ಯೆ ಕೆ, ಅನಿತಾ, ರಾಜ್ಯ ವೀಕ್ಷಕರು ಎಡಿಎಚ್‍ಎಸ್ ಯುನಿಸೆಫ್ ಸಲಹೆಗಾರ್ತಿ ಡಾ. ಸೌಮ್ಯ, ರೋಟರಿ ಕ್ಲಬ್ ವಲಯ ಸಂಯೋಜಕ ಎಂಡಿ ರಾಜೇಶ್ ಕಾಮತ್, ಐಎಪಿ ಕಾರ್ಯದರ್ಶಿ ಡಾ. ಮಾಹಿನ್ ಪಿ ಅಬ್ದುಲ್ಲಾ, ಐಎಂಎ ಅಧ್ಯಕ್ಷ ಡಾ. ಹರಿ ಕಿರಣ್ ಬಂಗೇರ, ವೈದ್ಯರ ಸಂಘದ ಅಧ್ಯಕ್ಷ ಡಾ.ಸುಂದರ ಆನೆಮಜಲ್, ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಡಿ. ಜಿ. ರಮೇಶ್ ಡಾ. ಬಾಸಿಲ್ ವರ್ಗೀಸ್, ವೈದ್ಯಕೀಯ ಅಧಿಕಾರಿ ಡಾ. ಸಿ. ವೇಣು, ಉಪ ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಪಿ. ಪಿ, ಹಸೀಬ್, ಐಸಿಡಿಎಸ್‍ಮೇಲ್ವಿಚಾರಕ ಟಿ. ರಾಮ ಉಪಸ್ಥಿತರಿದ್ದರು. ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ. ಶಾಂತಿ ಕೆ.ಕೆ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಕ ಸಜೀವನ್ ಪಿ.ವಿ ವಂದಿಸಿದರು.

ಕಾಸರಗೋಡು ಜಿಲ್ಲೆಯ 108217 ಮಕ್ಕಳಿಗೆ ಮತ್ತು 922 ಅತಿಥಿ ಕಾರ್ಮಿಕರ ಮಕ್ಕಳಿಗೆ ಪೆÇೀಲಿಯೊ ಹನಿ ಹಾಕಲು 1261 ಪೆÇೀಲಿಯೊ ಬೂತ್‍ಗಳನ್ನು ಸ್ಥಾಪಿಸಲಾಗಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries