ಭೋಪಾಲ: ಮಧ್ಯಪ್ರದೇಶದಲ್ಲಿ ದೀಪಾವಳಿಯಂದು 'ಕಾರ್ಬೈಡ್ ಗನ್' ಪಟಾಕಿಯಿಂದಾಗಿ 14 ಮಕ್ಕಳು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಮತ್ತು ತೀವ್ರ ಕಣ್ಣಿನ ಗಾಯಕ್ಕೆ ಒಳಗಾಗಿರುವ 122 ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೀಪಾವಳಿ ಸಂದರ್ಭದಲ್ಲಿ ಮಕ್ಕಳು 'ಕಾರ್ಬೈಡ್ ಗನ್''ನೊಂದಿಗೆ ಆಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಟಿನ್ ಪೈಪ್‌ಗಳು ಮತ್ತು ಗನ್‌ಪೌಡರ್‌ನಿಂದ ಮಾಡಲ್ಪಟ್ಟಿರುವ ಕಾರ್ಬೈಡ್ ಗನ್ ದೊಡ್ಡದಾಗಿ ಸ್ಫೋಟಿಸಿ, ಮುಖ ಮತ್ತು ಕಣ್ಣುಗಳಿಗೆ ಗಂಭೀರ ಗಾಯ ಉಂಟುಮಾಡುತ್ತದೆ.
ಮಧ್ಯಪ್ರದೇಶದಲ್ಲಿ, ಮೂರು ದಿನಗಳಲ್ಲಿ ತೀವ್ರ ಗಾಯಕ್ಕೆ ಒಳಗಾಗಿರುವ 130ಕ್ಕೂ ಅಧಿಕ ಮಕ್ಕಳನ್ನು ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಈ ಪೈಕಿ 14 ಮಕ್ಕಳು ತಮ್ಮ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಮಧ್ಯಪ್ರದೇಶದ ವಿದಿಶ ಜಿಲ್ಲೆಯಲ್ಲಿ ಇಂಥ ಅವಘಡಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿವೆ. ಕಾರ್ಬೈಡ್ ಗನ್‌ಗಳ ಮೇಲೆ ಅಕ್ಟೋಬರ್ 18ರಂದು ನಿಷೇಧ ವಿಧಿಸಲಾಗಿದ್ದರೂ, ಈ ಜಿಲ್ಲೆಯಲ್ಲಿ ಸ್ಥಳೀಯ ಅಂಗಡಿಗಳು ಕಾರ್ಬೈಡ್ ಗನ್‌ಗಳನ್ನು ಮುಕ್ತವಾಗಿ ಮಾರಾಟ ಮಾಡುತ್ತಿದ್ದವು.




