ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ 18ನೇ ವರ್ಷದ ಶಾರದೋತ್ಸವ ದಿ. ಆರ್. ಚಕ್ರೇಶ್ವರ್ ವೇದಿಕೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ಮತ್ತು ಗುರುವಾರಗಳಂದು ಬದಿಯಡ್ಕ ಶ್ರೀ ಗುರುಸದನದಲ್ಲಿ ಜರಗಿತು.
ಬುಧವಾರ ಬೆಳಗ್ಗೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಪ್ರಾರ್ಥನೆ, ಬೆಳಗಿನ ಪೂಜೆ, ಮಹಾಗಣಪತಿ ಹೋಮ, ವಿವಿಧ ಭಜನ ಸಂಘಗಳಿಂದ ಭಜನೆ, ಧ್ವಜಾರೋಹಣ, ಆಯುಧ ಪೂಜೆ ಜರಗಿತು. ಮಕ್ಕಳ ಕಲಾ ಸಾಂಸ್ಕøತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಸನ್ಮಾನ ಸಮಾರಂಭ, ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ. ಅಪರಾಹ್ನ ಭಕ್ತಿಗೀತೆ, ಭರತನಾಟ್ಯ, ಸಮೂಹ ನೃತ್ಯ, ಮರಾಟಿ ಭಾಷೆಯಲ್ಲಿ ಭಾಷಣ, ಮಿಮಿಕ್ರಿ ಮೊದಲಾದ ಕಲಾ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ಸಂಜೆ ಶ್ರೀ ಶಾರದಾಂಬ ಯಕ್ಷಗಾನ ಕಲಾಸಂಘ ಬದಿಯಡ್ಕ ಇವರಿಂದ ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಪುರಸ್ಕøತ ಜಯರಾಮ ಪಾಟಾಳಿ ಪಡುಮಲೆ ಇವರ ದಕ್ಷ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ಶ್ವೇತಕುಮಾರ ಚರಿತ್ರೆ ಪ್ರದರ್ಶನಗೊಂಡಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಗುರುವಾರ ಬೆಳಗ್ಗೆ ಭಜನೆ, ಉಷಃಪೂಜೆ, ಮಹಿಳಾ ಸಮಿತಿಯ ವತಿಯಿಂದ ತಿರುವಾದಿರ ನೃತ್ಯ, ಸಮಾರೋಪ ಸಮಾರಂಭ, ಪ್ರಶಸ್ತಿ ಪ್ರಧಾನ, ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ಗುರುಸದನದಿಂದ ಹೊರಟು ಬದಿಯಡ್ಕ ಪೇಟೆಯ ಮೂಲಕ ಸಾಗಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ವರದಾ ನದಿಯಲ್ಲಿ ವಿಗ್ರಹ ಜಲಸ್ಥಂಭನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಮೆರವಣಿಗೆಯಲ್ಲಿ ಸಿಂಗಾರಿಮೇಳ, ಮುತ್ತುಕೊಡೆ ಹಾಗೂ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಪ್ರದರ್ಶನ ಗಮನಸೆಳೆಯಿತು.





