HEALTH TIPS

ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಪುರಂದರದಾಸರ ಅನಸೂಯಾ ಚರಿತ್ರೆ ಯಕ್ಷಗಾನ ಕೃತಿ ಲೋಕಾರ್ಪಣೆ 18 ರಂದು

ಕಾಸರಗೋಡು: ಕರ್ನಾಟಕ ಸಂಗೀತ ಪಿತಾಮಹರೆನಿಸಿದ ಶ್ರೀ ಪುರಂದರದಾಸರು ರಚಿಸಿದ ಯಕ್ಷಗಾನ ಪ್ರಸಂಗ ವಿಶೇಷ ಕೃತಿ, ಸಿರಿಬಾಗಿಲು ಪ್ರತಿಷ್ಠಾನದ ಪ್ರಕಾಶನದಲ್ಲಿ ಪ್ರಕಟಗೊಳ್ಳುವ  "ಅನಸೂಯಾ ಚರಿತ್ರೆ" ಯಕ್ಷಗಾನ ಪ್ರಸಂಗದ ಲೋಕಾರ್ಪಣೆ ಅ. 18ರಂದು ಸಿರಿಬಾಗಿಲುಪ್ರತಿಷ್ಠಾನದಲ್ಲಿ ಜರುಗಲಿದೆ.


ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ರವರ ಸಂಪಾದಕತ್ವದ ಈ ಅಪೂರ್ವ ಕೃತಿಯನ್ನು ಶ್ರೀಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀಮದ್ ಜಗದ್ಗುರು ಮಧ್ವಾಚಾರ್ಯ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಲೋಕಾರ್ಪಣೆಗೈಯುವರು. ಸಂಪಾದಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಮೈಸೂರು ಇವರು ಕೃತಿ ಪರಿಚಯವನ್ನು ಮಾಡಲಿದ್ದಾರೆ. ಡಾ.  ಮಂಗಳೂರು ವಿಶ್ವವಿದ್ಯಾನಿಲಯದ ಪಿ ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ನಿರ್ದೇಶಕ ಡಾ. ಧನಂಜಯ ಕುಂಬಳೆ ಅಧ್ಯಕ್ಷತೆ ವಹಿಸುವರು. ಯಕ್ಷಗಾನದ ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ,   ವಿಶ್ರಾಂತ ಮುಖ್ಯೋಪಾಧ್ಯಾಯ ಶ್ರೀ ಕೃಷ್ಣಶರ್ಮ ಉಪಸ್ಥಿತರಿರುವರು.  ಕಾರ್ಯಕ್ರಮದ ಅಂಗವಾಗಿ ಹಿರಿಯ -ಕಿರಿಯ ಕಲಾವಿದರಿಂದ "ಅನಸೂಯಾ ಚರಿತ್ರೆ" ಯಕ್ಷ-ಗಾನ ಪ್ರಸ್ತುತಿ ನಡೆಯಲಿದೆ. 

ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ:

 ಎಂ. ಆರ್. ಪಿ. ಎಲ್. ನ  ಸಿ.ಎಸ್.ಆರ್. ಫಂಡ್ ಅನುದಾನದಿಂದ ಸಾಂಸ್ಕøತಿಕ ಭವನಕ್ಕೆ ಕೊಡುಗೆಯಾಗಿ ನೀಡಿದ ನೂತನ ಶೌಚಗೃಹ ಮತ್ತು ಸಾಂಸ್ಕೃತಿಕ ಭವನದ ಸೋಲಾರ್ ವ್ಯವಸ್ಥೆಯ ಅಳವಡಿಕೆಯ ಉದ್ಘಾಟನೆ ಅ.18ರಂದು ಮಧ್ಯಾಹ್ನ 2.30ಕ್ಕೆ ಜರುಗಲಿದೆ.

ಎಮ್. ಕೃಷ್ಣ ಹೆಗಡೆ ಮಿಯಾರು, ಜಿ.ಜಿ.ಎಂ., ಎಚ್.ಆರ್.ವಿಭಾಗ, ಎಂ. ಆರ್. ಪಿ. ಎಲ್. ಮಂಗಳೂರು ಉದ್ಘಾಟಿಸುವರು.  ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅಧ್ಯಕ್ಷತೆ ವಹಿಸಿ ವಹಿಸುವರು. ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ನ ಕಾರ್ಯನಿರ್ವಹಣಾ ಅಧಿಕಾರಿ ಮೋಹನ ಭಾಸ್ಕರ್ ಹೆಗಡೆ ಹಾಗೂ ಮಹಾಪ್ರಬಂದಕ ಗುರುಪ್ರಸಾದ ಶೆಟ್ಟಿ, ಕಲಾ ಪೆÇೀಷಕ ಯಾದವ ಕೋಟ್ಯಾನ್,  ಸಿರಿಬಾಗಿಲಿನ ಸಾಮಾಜಿಕ ಕಾರ್ಯಕರ್ತ ರವೀಂದ್ರ  ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಕಾರ್ಯಕ್ರಮದ ಅಂಗವಾಗಿ ಸಂಜೆ 4ಕ್ಕೆ  ಪ್ರಶಾಂತ್ ಕುಂಜಾಲು ,ಮೈಸೂರು ಮತ್ತು ಮನೆಯವರ ಪ್ರಾಯೋಜಕತ್ವದಲ್ಲಿ "ಯಕ್ಷಗಾನ ಪೂರ್ವ ರಂಗ- ಬಯಲಾಟ- ಸನ್ಮಾನ"" ನಡೆಯಲಿದೆ.  ಸಿರಿಬಾಗಿಲು ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಪೂರ್ವರಂಗ, 5ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನಿಡುವರು. ಕಾಸರಗೋಡಿನ ಹಿರಿಯರಂಗಭೂಮಿ ಹಾಗೂ ಚಲನಚಿತ್ರ ನಟ ಕಾಸರಗೋಡು ಚಿನ್ನ ,ಎನ್. ಎಂ. ಪಿ. ಎ. ಪಣಂಬೂರು ಇದರ ಸಹಾಯಕ ಮೆಟೀರಿಯಲ್ ಮ್ಯಾನೇಜರ್ ವಿನಯರಾಜ ಶೆಟ್ಟಿ ಚಿಪ್ಪಾರುಗುತ್ತು, ಕುದ್ರಪ್ಪಾಡಿ ಶ್ರೀ  ಸುಬ್ರಹ್ಮಣ್ಯ ದೇವಸ್ಥಾನದ ಸುಬ್ರಹ್ಮಣ್ಯ ಸೇವಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಪೆಜತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಧರ್ಮಸ್ಥಳ ಮೇಳದಲ್ಲಿ ಸತತ 50 ವರ್ಷಗಳ ನಿರಂತರ ಯಕ್ಷಗಾನ ಸೇವೆ ನೀಡುತ್ತಿರುವ ಹಿರಿಯ ಕಲಾವಿದ ವಸಂತಗೌಡ ಕಾಯರ್ತಡ್ಕ ಇವರಿಗೆ ಸನ್ಮಾನ ಹಾಗೂ ಮಾಧವ ಪಾಟಾಳಿ ನೀರ್ಚಾಲು ಇವರಿಗೆ ಕಲಾ ಗೌರವ ನಡೆಯಲಿದೆ. ತೆಂಕುತಿಟ್ಟಿನ ಹಿರಿಯ ಕಲಾವಿದರ ಕೂಡುವಿಕೆಯಿಂದ ಸಂಜೆ 6ಕ್ಕೆ ಕವಿ ಸೀತಾನದಿ ಗಣಪಯ್ಯ ಶೆಟ್ಟಿ ವಿರಚಿತ "ಶನೀಶ್ವರ ಮಹಾತ್ಮೆ" ಎಂಬ ಯಕ್ಷಗಾನ ಬಯಲಾಟವು ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries