ಬದಿಯಡ್ಕ: ಕೊಲ್ಲಂನಲ್ಲಿ ನಡೆದ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ಹುಡುಗರ ವಿಭಾಗದಲ್ಲಿ ಗೆದ್ದು ಚಾಂಪಿಯನ್ಶಿಪ್ ಪಡೆದ ಕಾಸರಗೋಡು ತಂಡವನ್ನು ಪ್ರತಿನಿಧಿಸಿದ ಅನ್ನಪೂರ್ಣೇಶ್ವರಿ ಹೈಸ್ಕೂಲ್ ಅಗಲ್ಪಾಡಿ ಶಾಲೆಯ ಹೆಮ್ಮೆಯ ವಿದ್ಯಾರ್ಥಿ ಮೊಹಮ್ಮದ್ ಅಮರುದ್ದೀನ್ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಶಾಲಾ ವ್ಯವಸ್ಥಾಪಕರಾದ ನಾರಾಯಣ ಶರ್ಮಾ ಬಳ್ಳಪದವು, ಮುಖ್ಯೋಪಾಧ್ಯಾಯ ಗಿರೀಶ ಎನ್, ದೈಹಿಕ ಶಿಕ್ಷಕ ನಂದೇಶ್ ಉಪಸ್ಥಿತರಿದ್ದರು.




.jpg)
