HEALTH TIPS

ಎಡನೀರಲ್ಲಿ `ಇದಳ್' - ಮಕ್ಕಳ `ಟ್ರೀ ಟಾಕ್' ನಾಳೆ

ಕಾಸರಗೋಡು: ಕಾಸರಗೋಡು ಸರ್ಕಾರಿ ಯುಪಿ ಶಾಲೆಯ ಇದಳ್ ಯೋಜನೆಯ ಮಕ್ಕಳನ್ನು ಪ್ರಕೃತಿಯೊಂದಿಗೆ ಬೆಸೆಯಲು ಮತ್ತು ಸಮುದಾಯ ಆಧಾರಿತ ಪೋಲೀಸ್ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಮಕ್ಕಳಿಗೆ ಪರಿಚಯಿಸಲು, ಅಕ್ಟೋಬರ್ 11 ರಂದು ಎಡನೀರು ಮಠದಲ್ಲಿ ಮಕ್ಕಳು ಮತ್ತು ಪೋಲೀಸರು ಸೇರಿ `ಟ್ರೀ ಟಾಕ್' ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. 

ಪರಿಸರ ಸಂರಕ್ಷಣೆ, ಪರಿಸರದ ಬಗ್ಗೆ ಸಮಾಜದ ಜವಾಬ್ದಾರಿ ಮತ್ತು ಪೋಲೀಸ್ ಹಾಗೂ ಮಕ್ಕಳ ನಡುವೆ ಉತ್ತಮ ಸಂಬಂಧವನ್ನು ಸ್ಥಾಪಿಸುವುದು ಈ ಜಂಟಿ ಕಾರ್ಯಕ್ರಮದ ಉದ್ದೇಶವಾಗಿದೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಬೆಳಿಗ್ಗೆ 10ಕ್ಕೆ ಡಾ. ಅನೀಶ್ ಬಾಬು ಅವರು ಮಕ್ಕಳೊಂದಿಗೆ `ಪ್ರಕೃತಿ ನಡಿಗೆ' ನಡೆಸಲಿದ್ದಾರೆ. ನಂತರ ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಶ್ರೇಣಿ ಡಿವೈಎಸ್‍ಪಿ ಡಾ. ಬಾಲಕೃಷ್ಣನ್ ಪಾಟಾಳಿ ಅವರು ಭಾಗವಹಿಸಿ ಸಂವಾದ ನಡೆಯಲಿದೆ. ಕಾರ್ಯಕ್ರಮದಲ್ಲಿ `ಇದಳ್' ಯೋಜನೆಯ ನೂರು ಮಕ್ಕಳು ಮತ್ತು ಶಿಕ್ಷಕರು ಭಾಗವಹಿಸಲಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries