ಕಾಸರಗೋಡು: ರಾಜ್ಯ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಚಾಂಪಿಯನ್ಸ್ ಬೋಟ್ ಲೀಗ್ ದೋಣಿ ಸ್ಪರ್ಧೆಯು ಅಕ್ಟೋಬರ್ 19 ರಂದು ಮಧ್ಯಾಹ್ನ 2 ಗಂಟೆಗೆ ನೀಲೇಶ್ವರ ಕೊಟ್ಟಪ್ಪುರಂನ ಅಚ್ಚಾಂತುರ್ತಿಯ ತೇಜಸ್ವಿನಿ ಹೊಳೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಿದ್ಧತೆಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಎಂ. ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ದೋಣಿ ಸ್ಪರ್ಧೆಯ ಬಗ್ಗೆಇದುವರೆಗೆ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ನಸೀಬ್, ಡಿಟಿಪಿಸಿ ಕಾರ್ಯದರ್ಶಿ ಜಿಜೇಶ್ ಕುಮಾರ್, ಎಎಸ್ಪಿ ದೇವದಾಸ್ ಮತ್ತು ವಿವಿಧ ಇಲಾಖೆಗಳ ಇತರ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರರು ಭಾಗವಹಿಸಿದ್ದರು.
ಚಾಂಪಿಯನ್ಸ್ ಬೋಟ್ ಲೀಗ್ ಸ್ಪರ್ಧೆಗಳು ಅಕ್ಟೋಬರ್ 19 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಸಾಂಸ್ಕøತಿಕ ವೈವಿಧ್ಯ ನಡೆಯಲಿವೆ. ಕಾಸರಗೋಡು ಜಿಲ್ಲೆಯಲ್ಲಿ ಇದೇ ಮೊದಲಬಾರಿಗೆ ಚಾಂಪಿಯನ್ಸ್ ಬೋಟ್ ಲೀಗ್ ಸ್ಪರ್ಧೆ ಆಯೋಜಿಸುತ್ತಿದೆ. ಸ್ಪರ್ಧೆ ವೀಕ್ಷಣೆಗೆ ಆಗಮಿಸುವ ಸಂದರ್ಶಕರ ಸುರಕ್ಷತೆ, ವಾಹನ ನಿಯಂತ್ರಣ, ಸ್ಪರ್ಧಿಗಳ ಸುರಕ್ಷತೆ ಇತ್ಯಾದಿಗಳನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸ್ಕೂಬಾ ತಂಡವನ್ನು ಅಗ್ನಿಶಾಮಕ ದಳ ನಿಯೋಜಿಸಲಿದೆ. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಉಪ ಡಿಎಂಒ ಡಾ. ಕೆ. ಸಂತೋಷ್, ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಲಾಲಿ ಜಾರ್ಜ್, ಚಂದೇರಾ ಪೆÇಲೀಸ್ ಠಾಣೆ ಎಸ್‍ಎಚ್‍ಒ ಕೆ. ಪ್ರಶಾಂತ್, ನೀಲೇಶ್ವರಂ ಪೆÇಲೀಸ್ ಠಾಣೆ ಎಸ್‍ಎಚ್‍ಒ,ಬಿ. ನಿಬಿನ್ ಪಿಡಬ್ಲ್ಯೂಡಿಕಟ್ಟಡಗಳ ಸಹಾiಯಕ ಎಂಜಿನಿಯರ್ ಕೆ. ಸುನೀಲ್ ಕುಮಾರ್, ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ವಿ. ಎನ್. ವೇಣುಗೋಪಾಲ್, ಸಹಾಯಕ ವಿದ್ಯುತ್ ನಿರೀಕ್ಷಕ ಎಂ.ಸಿ. ನಿತಿನ್, ಜಿಲ್ಲಾ ಸುಚಿತ್ವಾ ಮಿಷನ್ ಪ್ರತಿನಿಧಿ ಕೆ. ಸಂದೀಪ್ ಪಾಲ್ಗೊಂಡಿದ್ದರು.
(ಚಾಂಪಿಯನ್ಸ್ ಬೋಟ್ ಲೀಗ್ ದೋಣಿ ಸ್ಪರ್ಧೆಯ ಅವಲೋಕನಾ ಸಭೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನೇತೃತ್ವದಲ್ಲಿಜರುಗಿತು.)





