ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ 2025ನೇ ಸಾಳಿನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ವಾರ್ಡ್‍ಗಳ ಮೀಸಲಾತಿ ಪ್ರಕ್ರಿಯೆ ಚೀಟಿ ಎತ್ತುವ ಮೂಲಕ ಪೂರ್ಣಗೊಂಡಿದೆ.
ಕಾಸರಗೋಡು ಬ್ಲಾಕ್ ಪಂಚಾಯಿತಿ ವ್ಯಾಪ್ತಿಯ ಕುಂಬಳೆ ಮತ್ತು ಬದಿಯಡ್ಕ, ಮೊಗ್ರಾಲ್ ಪುತ್ತೂರು, ಮಧೂರು, ಚೆಮ್ಮನಾಡು ಮತ್ತು ಚೆಂಗಳ ಪಂಚಾಯಿತಿ, ನೀಲೇಶ್ವರಂ ಬ್ಲಾಕ್ ವ್ಯಾಪ್ತಿಯ ಕಯ್ಯೂರು ಚೀಮೇನಿ, ಚೆರುವತ್ತೂರು, ವಲಿಯಪರಂಬ, ಪಡನ್ನ, ಪಿಲಿಕೋಡ್, ತ್ರಿಕರಿಪುರ ಗ್ರಾಮಗಳು, ಪರಪ್ಪ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಕೋಡೋಂ-ಬೇಲೂರು, ಕಲ್ಲಾರ್, ಪನತ್ತಡಿ, ಬಳಾಲ್, ಕಿನಾನೂರು-ಕರಿಂದಲಂ, ವೆಸ್ಟ್ ಎಲೇರಿ ಮತ್ತು ಈಸ್ಟ್ ಎಲೇರಿ ಪಂಚಾಯತ್‍ಗಳುಮೀಸಲು ವಾರ್ಡ್‍ಗಳ ಚೀಟಿ ಎತ್ತುವ ಪ್ರಕ್ರಿಯೆ ಪೂರ್ತಿಗೊಳಿಸಲಾಗಿದ್ದು, ಮೀಸಲು ವಾರ್ಡ್‍ಗಳನ್ನು ಘೋಷಿಸಲಾಯಿತು.
ಕಾಸರಗೋಡು ಜಿಲ್ಲಾಧಿಕಾರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಆರ್.ಶೈನಿ, ಉಪನಿರ್ದೇಶಕ ಕೆ.ವಿ. ಹರಿದಾಸ್, ಚುನಾವಣಾ ಅಪರ ಜಿಲ್ಲಾಧಿಕಾರಿ ಎ.ಎನ್. ಗೋಪಕುಮಾರ್, ಡಿಐಎಲ್.ಎಲ್.ಆರ್.ಜಿ ತರಬೇತುದಾರರಾದ ಎಲ್.ಕೆ. ಸುಬೈರ್, ಸಿ.ವಿಜೀವನ್, ಕೆ.ವಿಬಿಜುಮತ್ತು ಇತರರು. ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಮಡಿದ್ದರು.
ಕಾಸರಗೋಡು, ನೀಲೇಶ್ವರಂ, ಪರಪ್ಪಬ್ಲಾಕ್ ಪಂಚಾಯಿತಿ ವ್ಯಾಪ್ತಿಯೊಳಗಿನ ಗ್ರಾಮ ಪಂಚಾಯಿತಿಗಳ ಮಹಿಳೆಯರು, ಪರಿಶಿಷ್ಟ ಜಾತಿ ಮಹಿಳೆಯರು, ಪರಿಶಿಷ್ಟ ಪಂಗಡ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳಿಗೆ ಮೀಸಲಾಗಿರುವ ಸ್ಥಾನಗಳ ಸಂಖ್ಯೆಯನ್ನು ಪುನರಾವರ್ತನೆಯ ಕ್ರಮದಲ್ಲಿ ಹಂಚಲಾಗುತ್ತದೆ. ವಾರ್ಡ್‍ಗಳಿಗೆ ಯಾವ ಕ್ಷೇತ್ರಗಳನ್ನು ನೀಡಬೇಕೆಂದು ನಿರ್ಧರಿಸಲು ಡ್ರಾ ನಡೆಸಲಾಯಿತು. ಈ ಮೂಲಕ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮೀಸಲು ವಾರ್ಡ್‍ಗಳ ಘೋಷಣೆ ಪೂರ್ಣಗೊಂಡಿದೆ.





