ಕಾಸರಗೋಡು: ಭಗವದ್ಗೀತಾ ಸ್ವಾಧ್ಯಾಯ ಸಮಿತಿಯ ಆಶ್ರಯದಲ್ಲಿ, 2000 ರಲ್ಲಿ ತಿರುವನಂತಪುರದಲ್ಲಿ ನಡೆದ ಅಂತರರಾಷ್ಟ್ರೀಯ ಗೀತಾ ವಿಚಾರ ಸಂಕಿರಣದ ರಜತ ಮಹೋತ್ಸವದಂಗವಾಗಿ
ಗೀತಾಯನಂ-2025 ಎಂಬ ಶೀರ್ಷಿಕೆಯಲ್ಲಿ ಕೇರಳ ರಾಜ್ಯಾದ್ಯಂತ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಗೀತಾಸ್ವಧ್ಯಾಯ ಸಮಿತಿಯ ಜಿಲ್ಲಾ ಸಂಚಾಲಕ ಚಂದ್ರಶೇಖರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ, ನೀಲೇಶ್ವರದ ಭಗವದ್ಗೀತಾ ಸ್ವಾಧ್ಯಾಯ ಸಮಿತಿ ವತಿಯಿಂದ ಅ. 5ರಂದು ಮಧ್ಯಾಹ್ನ 2.30ಕ್ಕೆ ನೀಲೇಶ್ವರ ತಳಿಯಿಲ್ ಶ್ರೀ ನೀಲಕಂಠೇಶ್ವರ
ದೇವಾಲಯದ ಸಾನ್ನಿಧ್ಯದಲ್ಲಿ ಕೊಳತ್ತೂರು ಅದ್ವೈತ ಆಶ್ರಮ ಮಠದ ಮುಖ್ಯಸ್ಥ ಪೂಜ್ಯ ಸ್ವಾಮಿ ಚಿದಾನಂದಪುರಿ ಅವರು ಭಗವದ್ಗೀತೆ ಆಧಾರಿತ ಪ್ರವಚನ ನೀಡಲಿದ್ದಾರೆ. ವಿವಿಧ ಮಠಗಳನ್ನು ಪ್ರತಿನಿಧಿಸುವ ಸನ್ಯಾಸಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ರಾಜ್ಯ ಸಂಯೋಜಕ ರಾಮನ್ ಕೀಯಾನ, ರಜತ ಜಯಂತಿ ಆಚರಣಾ ಸಮಿತಿಯ ಜಿಲ್ಲಾಧ್ಯಕ್ಷ ದಾಮೋದರ ಪಣಿಕ್ಕರ್, ನೀಲೇಶ್ವರಂ ರಜತ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಮಣಿಕಂಠನ್, ಪೆÇೀಷಕರಾದ ಮಾನ ವರ್ಮ ರಾಜಾ ಮತ್ತು ಡಾ. ಕೆ.ಸಿ.ಕೆ. ರಾಜಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಈ ಸಂದರ್ಭ ಮಕ್ಕಳಿಂದ ಭಗವದ್ಗೀತೆ ಪಾರಾಯಣ, ಯೋಗ-ವ್ಯಾಯಾಮ ಮತ್ತು ಶ್ರೀ ರಾಜನ್ ಮಾರಾರ್ ಅವರಿಂದ ಅಷ್ಟಪದಿ ನಡೆಯಲಿದೆ. ಈ ಸಂದರ್ಭ 2000 ರಲ್ಲಿ ತಿರುವನಂತಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಗೀತಾ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಪ್ರತಿನಿಧಿಗಳು ಮತ್ತು ನಾಗರಿಕ ನಾಯಕರನ್ನು ಸನ್ಮಾನಿಸಲಾಗುವುದು.
ದೇವಾಲಯಕ್ಕೆ ಚಿತ್ತೈಸಲಿರುವ ಶ್ರೀ ಚಿದಾನಂದಪುರಿ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ದೇವಾಲಯದ ಆವರಣದಿಂದ ವೇದಿಕೆಯವರೆಗೆ ಕರೆದೊಯ್ಯಲಾಗುವುದು. ಸ್ವಾಗತ ಸಮಿತಿ ಅಧ್ಯಕ್ಷ ಮಣಿಕಂದನ್ ಮೇಲತ್ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಸಿ. ಮಾನವರ್ಮ ರಾಜ, ಪಿ.ಕುಞÂರಾಮನ್ ಮಾಸ್ಟರ್, ಎ. ರಾಜೀವನ್, ಎಂ. ಚಂದ್ರಶೇಖರನ್, ಮುರಳೀಧರನ್ ಪಾಲಮಂಗಲಂ ಮತ್ತು ಸುರೇಶ್ ಕೋಕೋಟ್ ಉಪಸ್ಥಿತರಿದ್ದರು.




